ಕರ್ನಾಟಕ

karnataka

ETV Bharat / bharat

ತನ್ನ ಚಿಕ್ಕಪ್ಪನ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲಿಸಿದ ಅಪ್ರಾಪ್ತೆ!! - ಬಾಲಕಿಗೆ ಚಿಕ್ಕಪ್ಪನಿಂದಲೇ ಲೈಂಗಿಕ ಕಿರುಕುಳ ಆರೋಪ

ಗುರುಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿದ್ದ ಅಪ್ರಾಪ್ತೆ ಕೆಲ ದಿನಗಳಿಂದ ಅಲ್ಲಿಯೇ ಉಳಿದುಕೊಂಡಿದ್ದಳು. ಈ ವೇಳೆ, ಅವಳ ಚಿಕ್ಕಮ್ಮ ಮಾರ್ಕೆಟ್​ಗೆ ಹೋದ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆಯ ಜೊತೆ ಅವಳ ಚಿಕ್ಕಪ್ಪ ಅನುಚಿತವಾಗಿ ವರ್ತಿಸಿದ್ದನಂತೆ.

molestation
ಲೈಂಗಿಕ ಕಿರುಕುಳ ಕೇಸ್

By

Published : Feb 2, 2022, 6:59 AM IST

ಗುರುಗ್ರಾಮ(ಹರಿಯಾಣ):ಮನೆಗೆ ಹೋಗಿದ್ದ ವೇಳೆ ತನ್ನ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬಳು ತನ್ನ ಚಿಕ್ಕಪ್ಪನ ಮೇಲೆಯೇ ದೂರು ದಾಖಲಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಗುರುಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿದ್ದ ಅಪ್ರಾಪ್ತೆ ಕೆಲ ದಿನಗಳಿಂದ ಅಲ್ಲಿಯೇ ಉಳಿದುಕೊಂಡಿದ್ದಳು. ಈ ವೇಳೆ, ಅವಳ ಚಿಕ್ಕಮ್ಮ ಮಾರ್ಕೆಟ್​ಗೆ ಹೋದ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆಯ ಜೊತೆ ಅವಳ ಚಿಕ್ಕಪ್ಪ ಅನುಚಿತವಾಗಿ ವರ್ತಿಸಿದ್ದನಂತೆ.

ಇದರಿಂದ ಹೆದರಿದ್ದ ಅಪ್ರಾಪ್ತೆ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಈ ವಿಷಯವನ್ನು ಕೆಲ ದಿನಗಳ ಹಿಂದೆ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾಳೆ. ಆಗ ಸ್ನೇಹಿತ ಅವಳ ಚಿಕ್ಕಪ್ಪನ ವಿರುದ್ಧ ದೂರು ನೀಡಲು ತಿಳಿಸಿದಾಗ, ಅಪ್ರಾಪ್ತೆ ಇಲ್ಲಿನ ಮನೇಸರ್​ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದಾಳೆ.

ದೂರು ನೀಡಿದ ಬಳಿಕ ಆರೋಪಿ ಚಿಕ್ಕಪ್ಪ ತಲೆಮರೆಸಿಕೊಂಡಿದ್ದಾನೆ. ಅಲ್ಲದೇ, ಅಪ್ರಾಪ್ತೆಯು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details