ಕರ್ನಾಟಕ

karnataka

ETV Bharat / bharat

6 ಮಕ್ಕಳಿದ್ದ ಸರ್ಕಾರಿ ಶಾಲೆಯಲ್ಲೀಗ 45 ವಿದ್ಯಾರ್ಥಿಗಳು.. 'ರೂಪಾಯಿ ಟೀಚರ್'​ಗೊಂದು ಸಲಾಂ

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಜೆ ಪದ್ಮಾವತಿ ಎಂಬ ಶಿಕ್ಷಕಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವಾಗಲು ತಮ್ಮ ಶೇ.30ರಷ್ಟು ಸಂಬಳವನ್ನು ಮೀಸಲಿಟ್ಟಿದ್ದಾರೆ. ಸರ್ಕಾರಿ ಶಾಲೆ ಮತ್ತು ಮಕ್ಕಳ ಮೇಲಿನ ಅವರ ಕಾಳಜಿ ಇಂದು ಶಾಲೆಯಲ್ಲಿ ಹಾಜರಾತಿ ಹೆಚ್ಚಿಸಿದೆ.

Teacher Padmavathi
ಪದ್ಮಾವತಿ ಟೀಚರ್​

By

Published : Apr 12, 2021, 5:32 PM IST

ಕೃಷ್ಣ (ಆಂಧ್ರಪ್ರದೇಶ):ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಈಗಿನ ಕಾಲದಲ್ಲಿ ಆಂಧ್ರಪ್ರದೇಶದ ಶಿಕ್ಷಕಿಯೊಬ್ಬರು ಆರು ಮಂದಿ ಮಕ್ಕಳಿದ್ದ ಶಾಲೆಗೆ 45 ವಿದ್ಯಾರ್ಥಿಗಳು ಬಂದು ಕಲಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ಇವರು ಮಾಡಿದ್ದು ಪ್ರತಿಫಲವಿಲ್ಲದ ನಿಸ್ವಾರ್ಥ ಸೇವೆ.

ಪದ್ಮಾವತಿ ಟೀಚರ್​ಗೊಂದು ಸಲಾಂ

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡುವಾರಿಪಾಲೆಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಜೆ ಪದ್ಮಾವತಿ ಎಂಬ ಶಿಕ್ಷಕಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಹೆಸರಿನಲ್ಲಿ ಪೋಸ್ಟ್​ ಆಫೀಸ್​ನಲ್ಲಿ ಆರ್​ಡಿ ಉಳಿತಾಯ ಖಾತೆ ತೆರೆದಿದ್ದಾರೆ. ನಿತ್ಯ ಎಲ್ಲ ಮಕ್ಕಳಿಗೆ ಇವರು ಒಂದು ರೂಪಾಯಿ ಕೊಟ್ಟು, ಪ್ರತಿ ತಿಂಗಳು 30 ರೂ. ಹಣವನ್ನು ಆರ್‌ಡಿ ಖಾತೆಯಲ್ಲಿ ಠೇವಣಿ ಇಡುತ್ತಾರೆ. ಪದ್ಮಾವತಿ ಅವರು ಇದಕ್ಕಾಗಿ ತಮ್ಮ ಶೇ.30ರಷ್ಟು ಸಂಬಳ ಮೀಸಲಿಟ್ಟಿದ್ದಾರೆ.

ಇದನ್ನೂ ಓದಿ: ಇದು IPL​ ಅಲ್ಲ, PCL​: ಇಲ್ಲಿ ಅರ್ಚಕರಿಗಾಗಿ ನಡೆಯತ್ತೆ 'ಪುರೋಹಿತ್ ಕ್ರಿಕೆಟ್ ಲೀಗ್'

ಪದ್ಮಾವತಿ ಟೀಚರ್​ ಈ ಸೇವೆ ಆರ್ಥಿಕವಾಗಿ ಹಿಂದುಳಿದ ಜನರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಿದ್ದು, ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಇದೀಗ ಪ್ರೀತಿಯಿಂದ ಇವರನ್ನು ಗ್ರಾಮಸ್ಥರು, ಪೋಷಕರು 'ರೂಪಾಯಿ ಟೀಚರ್​' ಎಂದು ಕರೆಯುತ್ತಾರೆ.

ABOUT THE AUTHOR

...view details