ಗರಿಯಾಬಂದ್( ಛತ್ತೀಸ್ಗಡ): ಮದ್ಯಪಾನವನ್ನು ಒಪ್ಪದ ಪತ್ನಿಯನ್ನು ಶಿಕ್ಷಕ ಕೊಲೆಗೈದಿದ್ದಾನೆ. ಈ ಘಟನೆ ಛತ್ತೀಸ್ಘಡದ ಮಜರ್ಕಟ್ಟಾ ಜಿಲ್ಲೆಯ ಗರಿಯಾಬಂದ್‌ನಲ್ಲಿ ನಡೆದಿದೆ. ಹಲ್ಲೆಗೈದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಶುಕ್ರವಾರ ತಡರಾತ್ರಿ ಆರೋಪಿ ದೋಮನಕಾಂತ್ ಧ್ರುವ ಎಂದಿನಂತೆ ಮದ್ಯಪಾನ ಮಾಡಲು ಮುಂದಾಗಿದ್ದಾನೆ. ಈತನ ಹೆಂಡತಿ ಮೀನಾ ಧ್ರುವ ಕುಡಿಯದಂತೆ ತಿಳಿ ಹೇಳಿ ನಿರ್ಬಂಧಿಸಿದ್ದಾಳೆ. ಇದರಿಂದ ಕುಪಿತನಾದ ಆತ ಕುಡಿದ ಅಮಲಿನಲ್ಲಿ ಆಕೆಯ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟನೆಯ ಸಂಬಂಧ ಗರಿಯಾಬಂದ್ ಠಾಣೆ ಅಧಿಕಾರಿ ರಾಕೇಶ್ ಮಿಶ್ರಾ ಮಾತನಾಡಿ, ಮಜರ್ಕಟ್ಟಾದಲ್ಲಿ ವಾಸವಾಗಿರುವ ಶಿಕ್ಷಕ ದೋಮನಕಾಂತ್ ಧ್ರುವ ಇಂದಗಾಂವ್‌ನಲ್ಲಿ ಶಿಕ್ಷಕನಾಗಿದ್ದಾನೆ. ಈತನ ಪತ್ನಿ ಮೀನಾ ಧ್ರುವ ಗಂಜೈಪುರಿ ಶಾಲೆಯಲ್ಲಿ ಶಿಕ್ಷಕಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರು.
ದೋಮನಕಾಂತ್ ಧ್ರುವ್ ಕುಡಿತದ ಚಟ ಹೊಂದಿದ್ದು ಶುಕ್ರವಾರವೂ ಮದ್ಯಪಾನ ಮಾಡುತ್ತಿದ್ದ. ಪತ್ನಿ ಮೀನಾ ಧ್ರುವ ಮದ್ಯಪಾನ ಮಾಡದಂತೆ ನಿರ್ಬಂಧಿಸಿದ್ದಳು. ಇದರಿಂದ ಕೋಪಗೊಂಡ ಆತ ರಾಡ್‌ನಿಂದ ಆಕೆಯ ತಲೆಗೆ ಹೊಡೆದಿದ್ದು ಮೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ :ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ