ಗ್ವಾಲಿಯರ್(ಮಧ್ಯ ಪ್ರದೇಶ): ಗ್ವಾಲಿಯರ್ ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಸಾಕು ನಾಯಿವೂಂದು ಶಿಕ್ಷಕನ ಮನೆಯ ಮುಂದೆ ಶೌಚ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಕೋಲಿನಿಂದ ಶ್ವಾನವನ್ನು ಹೊಡೆದು ಶ್ವಾನವನ್ನು ಕೊಂದಿದ್ದಾರೆ.
ಪ್ರಕರಣದ ವಿವರಣೆ: ಗೋಲ್ ಪಹಾಡಿಯಾ ನಿವಾಸಿಯೊಬ್ಬರು ಶ್ವಾನವೊಂದನ್ನು ಸಾಕಿದ್ದರು. ಇವರ ಮನೆಯ ಪಕ್ಕದಲ್ಲೇ ಶಿಕ್ಷಕ ಮಾತಾದಿನ್ ಗುರ್ಜರ್ ನಿವಾಸುತ್ತಿದ್ದಾರೆ. ಶಿಕ್ಷಕನ ಮನೆಯ ಮುಂದೆ ಶ್ವಾನ ಶೌಚ ಮಾಡಿದೆ. ಇದರಿಂದ ಕೋಪಗೊಂಡ ಗುರ್ಜರ್ ಶ್ವಾನವನ್ನು ಕೋಲಿನಿಂದ ಥಳಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಓದಿ:‘ಖಂಡು ಭಾಯ್’ಗೆ ಜನ್ಮದಿನದ ಶುಭಾಶಯಗಳು.. ಶುಭಕೋರುವವರು..!
ಶಿಕ್ಷಕ ನಾಯಿಯನ್ನು ಥಳಿಸುತ್ತಿದ್ದಾಗ ಸ್ಥಳೀಯ ಜನರು ತಡೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಶಿಕ್ಷಕ ತನ್ನ ಮನೆಯಲ್ಲಿಟ್ಟಿದ್ದ ಪರವಾನಗಿ ಪಡೆದ ಗನ್ ಅನ್ನು ಹೊರತೆಗೆದು ಜನರಿಗೆ ಬೆದರಿಕೆ ಹಾಕಲು ಮುಂದಾದರು. ಇದರಿಂದ ಹೆದರಿದ ಜನರು ಅಲ್ಲಿಂದ ಕಾಲ್ಕಿತ್ತರು. ಜನರು ಹೋದ ನಂತರ ಶಿಕ್ಷಕ ಮತ್ತೆ ಶ್ವಾನದ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಆ ಶ್ವಾನ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.
ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪ್ರಾಣಿ ಪ್ರಿಯರು ಜನಕ್‌ಗಂಜ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಬಳಿಕ ಅನಿಮಲ್ ಸೊಸೈಟಿಯು ಪ್ರಾಣಿ ಹಿಂಸೆ ಕಾಯ್ದೆಯಡಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದರು. ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಜನಕ್‌ಗಂಜ್ ಪೊಲೀಸ್ ಠಾಣೆ ಪ್ರಭಾರಿ ಅಲೋಕ್ ಪರಿಹಾರ್ ಹೇಳಿದ್ದಾರೆ.