ಪಾಲಿ, ರಾಜಸ್ಥಾನ:ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕನೊಬ್ಬ ದಲಿತ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಘಟನೆ ಜಿಲ್ಲೆಯ ಸೋಜತ್ ಉಪವಿಭಾಗದ ಬಗ್ಡಿ ಗ್ರಾಮದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಕೂಡಲೇ ಆ ಶಿಕ್ಷಕನನ್ನು ಬಂಧಿಸಲಾಗಿದೆ.
ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ಅಮಾನತು:ವಿದ್ಯಾರ್ಥಿ ತನ್ನ ಸಹಪಾಠಿಗಳೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಶಿಕ್ಷಕ ಭನ್ವರ್ ಸಿಂಗ್ ಕೋಪಗೊಂಡು ವಿದ್ಯಾರ್ಥಿಯನ್ನು ಥಳಿಸಲು ಆರಂಭಿಸಿದ ಎಂದು ಮೂಲಗಳು ತಿಳಿಸಿವೆ. ಶಿಕ್ಷಕನು ವಿದ್ಯಾರ್ಥಿಗೆ ಬಹಳ ತೀವ್ರವಾಗಿ ಥಳಿಸಿದ್ದು, ಬಾಲಕ ದೇಹದಾದ್ಯಂತ ಬಾಸುಂಡೆಗಳು ಮೂಡಿವೆ. ಘಟನೆ ಕುರಿತು ಮಾಹಿತಿ ಪಡೆದ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.