ಕೋಲ್ಕತ್ತಾ(ಪಶ್ಚಿಮ ಬಂಗಾಳ):2020ಕ್ಕೆ ಹೋಲಿಸಿದ್ರೆ, ಈ ವರ್ಷ ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಚಹಾ ಶೇಕಡಾ 14.4 ರಷ್ಟು ಇಳಿಕೆಯಾಗಿದೆ. 2021ರ ಜನವರಿಯಿಂದ ಜುಲೈವರೆಗೆ 100.78 ಮಿಲಿಯನ್ ಕಿಲೋ ಗ್ರಾಂ ಚಹಾ ವಿದೇಶಗಳಿಗೆ ರಫ್ತಾಗಿದೆ. 2020 ರ ಇದೇ ಅವಧಿಯಲ್ಲಿ 117.56 ಮಿಲಿಯನ್ ಕಿಲೋಗ್ರಾಂಗಳಷ್ಟು ಚಹಾ ರಫ್ತಾಗಿತ್ತು ಎಂದು ಟೀ ಬೋರ್ಡ್ ದತ್ತಾಂಶ ತಿಳಿಸಿದೆ.
ಸಿಐಎಸ್ ಬ್ಲಾಕ್ 24.14 ಮಿಲಿಯನ್ ಕಿಲೋಗ್ರಾಂಗಳಷ್ಟು ಚಹಾ ಆಮದು ಮಾಡಿಕೊಳ್ಳುತ್ತಿದೆ. ನಿರ್ಬಂಧಗಳಿಂದಾಗಿ ಇರಾನ್‌ಗೆ ಸಾಗಿಸುತ್ತಿದ್ದ ಚಹಾ ಗಣನೀಯವಾಗಿ ಕಡಿಮೆಯಾಗಿದ್ದರೂ, ಪರ್ಷಿಯನ್ ದೇಶವು ಈ ವರ್ಷದ ಮೊದಲ ಏಳು ತಿಂಗಳಲ್ಲಿ 12.63 ಮಿಲಿಯನ್ ಕಿಲೋಗ್ರಾಂ ಚಹಾ ಆಮದು ಮಾಡಿಕೊಂಡಿದೆ. 2020 ರಲ್ಲಿ ಈ ದೇಶವು 21 ಮಿಲಿಯನ್ ಕಿಲೋಗ್ರಾಂಗಳಷ್ಟು ಆಮದು ಮಾಡಿಕೊಳ್ಳುತ್ತಿತ್ತು.
2020 ರ ಮೊದಲ ಏಳು ತಿಂಗಳಲ್ಲಿ ಚೀನಾಕ್ಕೆ 5.74 ಮಿಲಿಯನ್ ಕಿಲೋಗ್ರಾಮ್‌ಗಳಷ್ಟು ಚಹಾ ರಫ್ತು ಮಾಡಲಾಗುತ್ತಿತ್ತು. ಈಗಿನ ಸ್ಥಿತಿಯಲ್ಲಿ 3.29 ಮಿಲಿಯನ್ ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ. ಅಮೆರಿಕ ಮತ್ತು ಯುಎಇಗಳಿಗೆ ಮಾತ್ರ ಚಹಾ ಆಮದು ಹೆಚ್ಚಾಗಿದೆ ಎಂದು ಭಾರತದ ಟೀ ಬೋರ್ಡ್ ಹೇಳಿದೆ.