ಹೈದರಾಬಾದ್:ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಸೃಷ್ಟಿಯಾಗಿ ಇಂದಿಗೆ ಬರೋಬ್ಬರಿ 40 ವರ್ಷಗಳನ್ನು ಪೂರೈಸುತ್ತಿದೆ. 1982ರ ಮಾರ್ಚ್ 29 ರಂದು ಹೈದರಾಬಾದ್‌ನ ನ್ಯೂ ಎಂಎಲ್‌ಎ ಕ್ವಾಟ್ರಸ್‌ನ ಹೊರಗಡೆ ಟಿಡಿಪಿ ಉದಯಿಸಿತ್ತು. ಖ್ಯಾತ ನಟ ಎನ್‌ಟಿಆರ್ ಅವರ ಕನಸಿನ ತೆಲುಗು ದೇಶಂ ಪಕ್ಷ ಘೋಷಣೆಯ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸಾಕ್ಷಿಯಾಗಿದ್ದರು.
ನ್ಯೂ ಎಂಎಲ್‌ಎ ಕ್ವಾರ್ಟರ್ಸ್‌ನಲ್ಲಿನ ಶಾಸಕರ ಭವನದಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. 300 ಜನರೊಂದಿಗೆ ನಾಲ್ಕು ಗೋಡೆಗಳ ನಡುವೆ ನಡೆಯಬೇಕಿದ್ದ ಸಭೆಯನ್ನು ಎಂಎಲ್‌ಎ ಕ್ವಾರ್ಟರ್ಸ್ ಕ್ಯಾಂಪಸ್‌ಗೆ ಸ್ಥಳಾಂತರಿಸಬೇಕಾಯಿತು. ಕಾರಣ ಅಲ್ಲಿ ಸೇರಿದ್ದ ಎನ್‌ಟಿಆರ್ ಅಭಿಮಾನಿಗಳು ಹಾಗೂ ಯುವಕರ ದಂಡು.
ಸಭೆಯನ್ನು ಹುಲ್ಲುಹಾಸಿಗೆ ಸ್ಥಳಾಂತರಿಸಿದ ಬಳಿಕ ಮಾತನಾಡಿದ ಎನ್‌ಟಿಆರ್ ಅವರು ರಾಜಕೀಯ ಪಕ್ಷ ಆರಂಭಿಸುವುದಾಗಿ ಘೋಷಿಸಿದರು. ಕೆಲವರು ಪಕ್ಷದ ಹೆಸರು ಹೇಳುವಂತೆ ಒತ್ತಾಯಿಸಿದಾಗ ನಗುತ್ತಾ ಪ್ರತಿಕ್ರಿಯಿಸಿದ ಎನ್‌ಟಿ ರಾಮರಾವ್, ನಾನು ತೆಲುಗು ಮನುಷ್ಯ, ನನ್ನ ಪಕ್ಷ ತೆಲುಗು ದೇಶಂ ಪಕ್ಷ ಎಂದು ಘೋಷಿಸಿಕೊಂಡರು. ಆ ಬಳಿಕ ತೆಲುಗು ರಾಷ್ಟ್ರದಲ್ಲಿ ಟಿಡಿಪಿ ದೊಡ್ಡ ಸಂಚಲವನ್ನ ಸೃಷ್ಟಿಸಿದ್ದು ಇತಿಹಾಸ.
ಪಕ್ಷ ಸ್ಥಾಪನೆಯಾದ ಒಂಬತ್ತು ತಿಂಗಳಲ್ಲೇ ಎನ್‌ಟಿಆರ್ ಆರಂಭಿಸಿದ ತೆಲುಗು ದೇಶಂ ಪಕ್ಷವು ರಾಜ್ಯಕ್ಕೆ ಹೊಸ ರೀತಿಯ ರಾಜಕೀಯವನ್ನು ಪರಿಚಯಿಸಿತು. ಎನ್‌ಟಿಆರ್ ಅವರು ‘ತೆಲುಗುದೇಶಂ ಪಿಲಿಸ್ತೊಂದಿ ರಾ, ಕದಲಿರಾ(ತೆಲುಗು ದೇಶಂ ಕರೆಯುತ್ತಿದೆ ಬಾ... ಎದ್ದು ಬಾ) ಎಂದು ಕರೆದಾಗ ಜನಸಾಗರವೇ ಹರಿದು ಬಂದಿತ್ತು.
ಹೊಸ ಟ್ರೆಂಡ್ ಸೃಷ್ಟಿಸಿದ್ದ ಎನ್‌ಟಿಆರ್:ರಾಜಕೀಯ ಪಕ್ಷಗಳ ಸಭೆಗಳಿಗೆ ಜನರನ್ನು ಕರೆತರುವ ಪದ್ಧತಿಯೇ ಬದಲಾಯಿತು. ಚೈತನ್ಯ ರಥದಲ್ಲಿ ಎನ್‌ಟಿಆರ್ ಜನರ ನಡುವೆ ಸಂಚರಿಸಿದರು. ಗ್ರಾಮದಲ್ಲಿ ಎಲ್ಲಿ ಕಂಡರೂ ಸಾರ್ವಜನಿಕ ಸಭೆಗಳು ನಡೆದವು. ಎನ್‌ಟಿಆರ್ ಚೈತನ್ಯ ರಥದಲ್ಲಿ ಮಲಗಿ ರಸ್ತೆ ಬದಿಯಲ್ಲಿ ಸ್ನಾನ ಮಾಡುತ್ತಿದ್ದರು. ಹೀಗೆ ಅವರು ಹೊಸ ಟ್ರೆಂಡ್ ಸೃಷ್ಟಿಸಿದರು. ಇದಾದ ಕೆಲವೇ ದಿನಗಳಲ್ಲಿ ಟಿಡಿಪಿ ವಿಜಯ ಪತಾಕೆ ಹಾರಿಸಿತು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಕ್ಷ ಮೊದಲ ಹಿನ್ನಡೆ ಅನುಭವಿಸಿತು. 1984ರ ಆಗಸ್ಟ್‌ನಲ್ಲಿ ಎನ್‌ಟಿಆರ್ ಅವರನ್ನೇ ಪಕ್ಷದಿಂದ ಹೊರಹಾಕಲಾಯಿತು.
ಅಮೆರಿಕದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎನ್‌ಟಿಆರ್ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಮತ್ತೆ ಚಳವಳಿಯ ನೇತೃತ್ವ ವಹಿಸಿದರು. ಒಂದು ತಿಂಗಳ ಕಾಲ ನಡೆಸಿದ ಜನಾಂದೋಲನದಿಂದಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೇ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಎನ್‌ಟಿಆರ್ ಮತ್ತೆ ಟಿಡಿಪಿಯಿಂದ ಮುಖ್ಯಮಂತ್ರಿಯಾದರು.
1983, 1985, 1989 ಮತ್ತು 1994 ರಲ್ಲಿ ಎನ್‌ಟಿಆರ್ ಆಡಳಿತದಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ತೆಲುಗು ದೇಶಂ ಮೂರು ಬಾರಿ ಘನ ಜಯ ಸಾಧಿಸಿತು. ಮೂರು ಬಾರಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ಸಾಧನೆ ರಾಮರಾವ್ ಅವರದ್ದು.