ನವದೆಹಲಿ:ಜಾಗತಿಕ ಎಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಡಿಜಿಟಲ್ ಸೇವಾ ಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್, ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು FY2023 ರಲ್ಲಿ ಹೆಚ್ಚುವರಿಯಾಗಿ ಕನಿಷ್ಠ 1,000 ಜನರನ್ನು ನೇಮಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಕಂಪನಿಯ ಉನ್ನತ ಅಧಿಕಾರಿಯ ಪ್ರಕಾರ, ಈ ರೀತಿ ಮಾಡುವುದರಿಂದ ಕಂಪನಿಯ ವ್ಯಾಪಾರ ಬೆಳವಣಿಗೆಯು ವೇಗಗೊಳ್ಳಲಿದೆ. ಜನವರಿಯಲ್ಲಿ, ಕಂಪನಿಯು ತನ್ನ ವಿಸ್ತರಿತ ಪ್ರತಿಭಾ ಸಂಪಾದನೆ ಕಾರ್ಯಕ್ರಮದಡಿಯಲ್ಲಿ 12 ತಿಂಗಳ ಅವಧಿಗೆ 3,000 ನವೋದ್ಯಮಿಗಳನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಪ್ರಕಟಿಸಿತ್ತು. ಜಾಗತಿಕವಾಗಿ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಮತ್ತು ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ತನ್ನ ಕಾರ್ಯಪಡೆಯನ್ನು ಹೆಚ್ಚಿಸಲು ಯೋಜಿಸಿದೆ.
ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯು 1,500 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ನಾವು 2023 ರ ಆರ್ಥಿಕ ವರ್ಷದಲ್ಲಿ 3,000 ಕ್ಕಿಂತ ಹೆಚ್ಚಿನ ಜನರನ್ನು ನೇಮಿಸಿಕೊಳ್ಳುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.