ಕರ್ನಾಟಕ

karnataka

ETV Bharat / bharat

ಏಪ್ರಿಲ್​ 1 ರಿಂದ ಟಾಟಾ ಮೋಟರ್ಸ್​ ವಾಹನಗಳ ಬೆಲೆಯಲ್ಲಿ ಏರಿಕೆ - Tata Motors car price to hike

ಉತ್ಪಾದನೆಯ ವಿವಿಧ ಹಂತಗಳಲ್ಲಿ ಎದುರಿಸುವ ಬೆಲೆ ಹೆಚ್ಚಳದ ಹೊರೆಯನ್ನು ಉಳಿಕೆಯ ಅನುಪಾತಕ್ಕೆ ಸರಿದೂಗಿಸಲು ಕಂಪನಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ..

Tata Motors
ಟಾಟಾ ಮೋಟರ್ಸ್​

By

Published : Mar 22, 2022, 3:43 PM IST

ನವದೆಹಲಿ :ಭಾರತದ ಟಾಟಾ ಮೋಟರ್ಸ್​ ಏಪ್ರಿಲ್​ 1ರಿಂದ ತನ್ನ ವಾಹನಗಳ ಬೆಲೆಯನ್ನು ಅವುಗಳ ಮಾಡೆಲ್​ ಮತ್ತು ವೇರಿಯೆಂಟ್​ಗಳಿಗನುಗುಣವಾಗಿ ಶೇ.2 ರಿಂದ 2.5ವರೆಗೆ ಹೆಚ್ಚಿಸುವುದಾಗಿ ಮಂಗಳವಾರ ತಿಳಿಸಿದೆ.

ಉಕ್ಕು, ಅಲ್ಯೂಮಿನಿಯಂ ಮತ್ತು ಇತರ ಬೆಲೆಬಾಳುವ ಲೋಹಗಳಿಂದ ತಯಾರಾದ ಸರಕುಗಳ ಬೆಲೆಯಲ್ಲಿನ ಹೆಚ್ಚಳ ಮತ್ತು ಇತರ ಕಚ್ಚಾ ವಸ್ತುಗಳ ಮೇಲಿನ ಬೆಲೆ ಏರಿಕೆ ಕಾರಣದಿಂದಾಗಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ.

ಉತ್ಪಾದನೆಯ ವಿವಿಧ ಹಂತಗಳಲ್ಲಿ ಎದುರಿಸುವ ಬೆಲೆ ಹೆಚ್ಚಳದ ಹೊರೆಯನ್ನು ಉಳಿಕೆಯ ಅನುಪಾತಕ್ಕೆ ಸರಿದೂಗಿಸಲು ಕಂಪನಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ನೀವು ಕ್ರೆಡಿಟ್ ಕಾರ್ಡ್​ ಹೊಂದಿರುವಿರಾ? ಹಾಗಾದರೆ ಇವೆಲ್ಲ ಆಫರ್​​ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

ಕಳೆದ ವಾರ ಮರ್ಸಿಡಿಸ್-ಬೆನ್ಝ್ ಇಂಡಿಯಾ ತಯಾರಿಕ ವಸ್ತುಗಳ ಮೇಲಿನ ಬೆಲೆ ಏರಿಕೆಯ ಪರಿಣಾಮವನ್ನು ಸರಿದೂಗಿಸುವ ಸಲುವಾಗಿ ಏಪ್ರಿಲ್​ 1ರಿಂದ ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಶೇ.3ರಷ್ಟು ಹೆಚ್ಚಿಸಲಾಗುವುದು ಎಂದು ಕಂಪನಿ ಹೇಳಿತ್ತು.

ABOUT THE AUTHOR

...view details