ಕರ್ನಾಟಕ

karnataka

ETV Bharat / bharat

ಹೊಸ ಮಾಡಲ್ ಕಾರು ರಿಲೀಸ್ ಮಾಡಿದ ಟಾಟಾ ಮೋಟರ್ಸ್​​ - ಟಾಟಾ ಮೋಟಾರ್ಸ್ ಕಂಪನಿಯ ಆಲ್ಟ್ರೋಜ್​​​ ಕಾರಿನ ಬೆಲೆ 6.6 ಲಕ್ಷ

ಟಾಟಾ ಮೋಟಾರ್ಸ್​​ ಮಾರುಕಟ್ಟೆಗೆ ಹೊಸ ಕಾರೊಂದನ್ನು ಪರಿಚಯಿಸಿದೆ. ಈ ಕಾರಿನ ಬೆಲೆ 6.6 ಲಕ್ಷ ರೂಪಾಯಿ ಇದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ಕಂಪನಿ ಹೇಳಿದೆ.

Rs 6.6 lakh
ಕಾರು ರಿಲೀಸ್..

By

Published : Nov 7, 2020, 1:36 PM IST

ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಲ್ಟ್ರೋಜ್​ನ ಹೊಸ ಮಾಡಲ್ ಕಾರನ್ನು ಪರಿಚಯಿಯಿಸಿದೆ. ಈ ಹೊಸ ಕಾರಿನ ಆರಂಭಿಕ ಬೆಲೆ 6.6 ಲಕ್ಷ ರೂಪಾಯಿ ಇದೆ ಎಂದು ಕಂಪನಿ ತಿಳಿಸಿದೆ.

ಈ ವಾಹನ ಪೆಟ್ರೋಲ್ ಚಾಲಿತ ಎಕ್ಸ್‌ಎಂ + ಟ್ರಿಮ್ 17.78 ಸೆಂ.ಮೀ. ಟಚ್‌ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯಂತಹ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ವಾಯ್ಸ್ ಅಲರ್ಟ್ಸ್, ವಾಯ್ಸ್ ಕಮಾಂಡ್ ರೆಕಗ್ನೇಷನ್, ರಿಮೋಟ್ ಫೋಲ್ಡಬಲ್ ಕೀ ಸಹ ಹೊಂದಿದೆ ಎಂದು ಟಾಟಾ ಮೋಟಾರ್ಸ್ ಕಂಪನಿ ತಿಳಿಸಿದೆ.

ಎಕ್ಸ್‌ಎಂ + ಮಾಡಲ್ ಗ್ರಾಹಕರಿಗೆ ಅತ್ಯಂತ ಆಕರ್ಷಕ ಬೆಲೆಯಲ್ಲಿ ಸಿಗಲಿದೆ. ವಿವಿಧ ರೀತಿಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಆಲ್ಟ್ರೊಜ್‌ನ ಆಕರ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯುನಿಟ್ ನ (ಪಿವಿಬಿಯು) ಮಾರ್ಕೆಟಿಂಗ್ ಹೆಡ್ ವಿವೇಕ್ ಶ್ರೀವತ್ಸ ತಿಳಿಸಿದ್ದಾರೆ.

ABOUT THE AUTHOR

...view details