ಬೆಂಗಳೂರು:ಭಾರತದ ಪ್ರಮುಖ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ ಕಾರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ ಎಂದು ಪ್ರಕಟಿಸಿದೆ.
24 ಗಂಟೆಗಳಲ್ಲಿ ಸುಮಾರು 1,603 ಕಿ.ಮೀ ದೂರವನ್ನು ಕ್ರಮಿಸಿದ ಆಲ್ಟ್ರೋಜ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಮಾಡಿದೆ. ಈ ಅಸಾಧಾರಣ ಪ್ರಯಾಣವನ್ನು ಪುಣೆ ಮೂಲದ ವಾಹನ ಉತ್ಸಾಹಿ ಶ್ರೀ ದೇವ್ಜೀತ್ ಸಹಾ ಅವರು ಕೈಗೊಂಡು, 2020 ಡಿಸೆಂಬರ್ 15ರಂದು ಸತಾರಾದಿಂದ ಬೆಂಗಳೂರಿಗೆ ಹಾಗೂ ಡಿಸೆಂಬರ್ 16 ರಂದು ಬೆಂಗಳೂರಿನಿಂದ ಪುಣೆಗೆ ತಲುಪಿ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.
ಪ್ರಶಸ್ತಿ ಕುರಿತು ಮಾತನಾಡಿದ ದೇವ್ಜೀತ್ ಸಹಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ, ಈ ಪ್ರಯಾಣವನ್ನು ಕೈಗೊಳ್ಳಲು ಅವಕಾಶ ನೀಡಿದ ಟಾಟಾ ಮೋಟಾರ್ಸ್ ಕಂಪನಿಗೆ ನಾನು ವಿನಮ್ರನಾಗಿದ್ದೇನೆ. ಈ ಗೆಲುವಿಗೆ ಸಹಕರಿಸಿದ ಟಾಟಾ ಆಲ್ಟ್ರೊಜ್ ತಂಡಕ್ಕೆ ಆಭಾರಿಯಾಗಿದ್ದೇನೆ ಎಂದ ಅವರು, ತನ್ನ ಗ್ರಾಹಕರಿಗೆ ಅಸಾಧಾರಣ ಉತ್ಪನ್ನಗಳನ್ನು ಒದಗಿಸುತ್ತಿರುವ ಟಾಟಾ ಮೋಟಾರ್ಸ್‌ಗೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಟಾಟಾ ಆಲ್ಟ್ರೊಜ್ ಟಾಟಾ ಮೋಟಾರ್ಸ್‌ನ ಮಾರ್ಕೆಟಿಂಗ್, ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ ಮುಖ್ಯಸ್ಥ ಶ್ರೀ ವಿವೇಕ್ ಶ್ರೀವತ್ಸ ಮಾತನಾಡಿ, ಈ ಸಾಧನೆ ಮಾಡಿದ ಶ್ರೀ ದೇವ್ಜೀತ್ ಸಹಾ ಅವರನ್ನು ನಾನು ಅಭಿನಂದಿಸುತ್ತೇನೆ. ಪ್ರಾರಂಭದಿಂದಲೂ, ಆಲ್ಟ್ರೊಜ್ ತನ್ನ ಆಕರ್ಷಕ ವಿನ್ಯಾಸ, ಉನ್ನತ ದರ್ಜೆಯ ಸುರಕ್ಷತೆ ಮತ್ತು ರೋಮಾಂಚಕ ಕಾರ್ಯಕ್ಷಮತೆಯ ಮೂಲಕ ತನ್ನ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಈ ಅಪರೂಪದ ಮೈಲಿಗಲ್ಲನ್ನು ಸಾಧಿಸಲು ಶ್ರೀ ಸಹಾ ಅವರು ಆಲ್ಟ್ರೊಜ್ ಕಾರನ್ನು ಆರಿಸಿಕೊಂಡಿದ್ದಕ್ಕೆ ನಮಗೆ ಸಂತೋಷವಾಗಿದೆ. ಈ ರೀತಿಯ ಸಾಧನೆಗಳ ಮೂಲಕ ನಾವು ನಮ್ಮ ಗ್ರಾಹಕರಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತೇವೆ ಎಂದು ಭಾವಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಟಾಟಾ ಮೋಟರ್ಸ್ ಕುರಿತ ಮಾಹಿತಿ:ಟಾಟಾ ಮೋಟರ್ಸ್ ಇದು ಟಾಟಾ ಸಮೂಹದ ಬಹುರಾಷ್ಟ್ರೀಯ ಸಾಗಾಣಿಕೆ ವಾಹನ ಮತ್ತು ಪ್ರಯಾಣಿಕರ ವಾಹನ ತಯಾರಿಕೆಯ ಸಂಸ್ಥೆ. ಇದು ಭಾರತದ ಅತಿದೊಡ್ಡ ಮತ್ತು ಏಕೀಕೃತ ಕಂಪನಿಯಾಗಿದೆ. ಮಾರ್ಚ್ 31, 2020 ರ ವೇಳೆಗೆ 103 ಅಂಗ ಸಂಸ್ಥೆಗಳು, 10 ಸಹಾಯಕ ಕಂಪನಿಗಳು, 3 ಜಂಟಿ ಉದ್ಯಮಗಳು ಮತ್ತು 2 ಜಂಟಿ ಕಾರ್ಯಾಚರಣೆಗಳ ಬಲವಾದ ಜಾಗತಿಕ ಜಾಲದ ಮೂಲಕ ಭಾರತ, ಯುಕೆ, ದಕ್ಷಿಣ ಕೊರಿಯಾ, ಥಾಯ್ಲೆಂಡ್ ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾದಲ್ಲಿ ಕಾರ್ಯಾಚರಣೆಯನ್ನು ವ್ಯಾಪಿಸಿದೆ. ಇದು ವಾಣಿಜ್ಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಯಾಣಿಕರ ವಾಹನಗಳ ಮಾರುಕಟ್ಟೆಯಲ್ಲಿ ಅಗ್ರ 4ನೇ ಸ್ಥಾನದಲ್ಲಿದೆ.
ದೇವ್ಜೀತ್ ಸಹಾ ಕುರಿತ ಮಾಹಿತಿ:ದೇವ್ಜೀತ್ ಸಹಾ ವೃತ್ತಿಯಿಂದ ಎಂಬಿಎ ಪದವೀದರ ಮತ್ತು ಉತ್ಸಾಹದಿಂದ ಹವ್ಯಾಸಿ ವಾಹನ ಚಾಲಕರಾಗಿದ್ದಾರೆ. ಪುಣೆ ಮೂಲದ ಶ್ರೀ ಸಹಾ ಅವರು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ರೈಡ್ ಮೇಲೆ ದಾಖಲೆಗಳನ್ನು ರಚಿಸಿದ್ದಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಬರುವ ವಾಹನಗಳನ್ನು ಪರೀಕ್ಷಿಸುವ ಕೆಲಸವನ್ನು ಇವರು ಸುಮಾರು ಒಂದು ದಶಕದಿಂದಲೂ ನಿರ್ವಹಿಸುತ್ತಾ ಬಂದಿದ್ದಾರೆ.
ಓದಿ:25 ಕಿ.ಮೀ ದೂರದವರೆಗೆ ಸಂಬಂಧಿಗಳ ಬೆನ್ನೇರಿ ಆಸ್ಪತ್ರೆಗೆ ದಾಖಲಾದ ಮಹಿಳೆ.!