ನವದೆಹಲಿ: ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ತಮ್ಮ ಫೇಸ್‌ಬುಕ್ ಖಾತೆಯನ್ನು ಸಾಮಾಜಿಕ ಮಾಧ್ಯಮ ದೈತ್ಯರು ಏಳು ದಿನಗಳ ಕಾಲ ಮತ್ತೊಮ್ಮೆ ಬ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಸಂಬಂಧ ಬರೆದುಕೊಂಡಿರುವ ಅವರು, ಸತ್ಯವನ್ನು ಹೇಳಿದ್ದಕ್ಕಾಗಿ ಫೇಸ್‌ಬುಕ್ ನನ್ನನ್ನು ಮತ್ತೆ 7 ದಿನಗಳವರೆಗೆ ನಿಷೇಧಿಸಿದೆ ಎಂದಿದ್ದಾರೆ.
ಈ ವರ್ಷ ಮಾರ್ಚ್ 16ರಂದು ಫೇಸ್‌ಬುಕ್ 24 ಗಂಟೆಗಳ ಕಾಲ ಬಳಸದಂತೆ ನಿರ್ಬಂಧಿಸಿತ್ತು. ನನ್ನ ಅಪರಾಧವೆಂದರೆ ಬಾಂಗ್ಲಾದೇಶದ ಕರಕುಶಲ ಅಂಗಡಿಯ ಆರೋಂಗ್‌ನ ನಿರ್ಧಾರವನ್ನು ನಾನು ಇಷ್ಟಪಟ್ಟೆ. ಇನ್ನು ಮಾರ್ಚ್ 17 ರಂದು ಬಾಂಗ್ಲಾದೇಶ ಸರ್ಕಾರಗಳು ತನ್ನ ಪುಸ್ತಕಗಳನ್ನು ನಿಷೇಧಿಸಿವೆ.
ಜಿಹಾದಿಗಳು ನನ್ನ ಪುಸ್ತಕಗಳನ್ನು ಸುಡುತ್ತಾರೆ ಮತ್ತು ಪುಸ್ತಕಗಳನ್ನು ಮಾರಾಟ ಮಾಡದಂತೆ ಪುಸ್ತಕ ಮಾರಾಟಗಾರರಿಗೆ ಬೆದರಿಕೆ ಹಾಕುತ್ತಾರೆ. ಬಂಗಾಳಿ ಭಾಷೆಯಲ್ಲಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಒಂದೇ ಒಂದು ವೇದಿಕೆ ಇದೆ.
ಅದು ಎಫ್ಬಿ. ಆದರೆ, ನಾನು ಎಫ್ಬಿನಲ್ಲಿ ಮುಕ್ತವಾಗಿ ಬರೆಯಲು ನನ್ನ ಸ್ವಾತಂತ್ರ್ಯವನ್ನು ಬಳಸಿದಾಗ ಎಫ್ಬಿ ನನ್ನನ್ನು ನಿಷೇಧಿಸುತ್ತದೆ ಎಂದಿರುವ ಅವರು, ಸ್ವತಂತ್ರ ಚಿಂತಕರಿಗೆ ಯಾವುದೇ ಸ್ವತಂತ್ರ ಭಾಷಣವಿಲ್ಲ ಎಂದು ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ನಸ್ರೀನ್ 1994ರಲ್ಲಿ ಬಾಂಗ್ಲಾದೇಶವನ್ನು ತೊರೆದರು. ಆಕೆಯ ಆಪಾದಿತ ಇಸ್ಲಾಂ ವಿರೋಧಿ ದೃಷ್ಟಿಕೋನಗಳಿಗಾಗಿ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆಯ ಹಿನ್ನೆಲೆ ಅವರು ಯಾರಿಗೂ ಕಾಣಿಸಿಕೊಳ್ಳದಂತೆ ವಾಸಿಸುತ್ತಿದ್ದಾರೆ.