ಸೂರತ್( ಗುಜರಾತ್): ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಯನ್ನು ತನ್ನ ತಾಯಿಯ ಬಳಿ ಸೇರಿಸಿರುವ ಘಟನೆ ಸೂರತ್ನ ಕನಾರ ಎಂಬ ಹಳ್ಳಿಯಲ್ಲಿ ನಡೆದಿದೆ.
ಮರಿ ಚಿರತೆ ಅನ್ನು ತಾಯಿ ಕರಿ ಚಿರತೆ ಬಳಿ ಸೇರಿಸಿದ ಟ್ಯಾಪಿ ಅರಣ್ಯ ಇಲಾಖೆ ಕನಾರ ಗ್ರಾಮದ ಓರ್ವ ರೈತನ ಮನೆ ಬಳಿಯ ಬಾವಿಯಲ್ಲಿ 1 ತಿಂಗಳ ವಯಸ್ಸಿನ ಕರಿ ಚಿರತೆ ಮರಿ ಬಿದ್ದಿರುವುದು ಕಂಡುಬಂದಿದೆ. ಸೋಂಗದ್ ಪಟ್ಟಣದ ಕನಾರ ಗ್ರಾಮದ ನಿವಾಸಿಗಳು ಬಾವಿ ಪಕ್ಕದಲ್ಲಿ ಮೂಲಕ ಹಾದುಹೋಗುವಾಗ ಚಿರತೆ ಮರಿ ಬಿದ್ದಿರುವುದು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ನಂತರ ತಾಯಿ ಪ್ಯಾಂಥರ್ ಕೂಡ ಹತ್ತಿರದಲ್ಲಿದೆ ಎಂದು ಊಹಿಸಿ, ಬಾವಿಯಿಂದ ದೂರ ಇರುವಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸತತ ಪ್ರಯತ್ನದಿಂದ ತಾಯಿ ಪ್ಯಾಂಥರ್ ಮತ್ತು ಮರಿ ಪ್ಯಾಂಥರ್ ಅನ್ನು ಒಂದು ಮಾಡಲಾಗಿದೆ.
ಕಾರ್ಯಾಚರಣೆ ಹಂತ:
ಮೊದಲು ಮರಿ ಪ್ಯಾಂಥರ್ ಅನ್ನು ಸಣ್ಣ ಪಂಜರದಲ್ಲಿ ಹಾಕಿ, ನಂತರ ಅರಣ್ಯ ಇಲಾಖೆ ತಾಯಿಯೊಂದಿಗೆ ಮತ್ತೆ ಸೇರಿಸಲು ಪ್ರಯತ್ನಿಸಿತು. ತಾಯಿ ಪ್ಯಾಂಥರ್ ತನ್ನ ಮರಿ ಶಬ್ದವನ್ನು ಕೇಳಿ ಹತ್ತಿರ ಬಂದು ಎತ್ತಿಕೊಂಡು ಹೋಗಿದೆ. ನಂತರ ಈ ಬಗ್ಗೆ ಮಾಹಿತಿ ನೀಡಿದ ಡಿಎಫ್‌ಒ ಆನಂದ್ ಕುಮಾರ್, ಮರಿ ಪ್ಯಾಂಥರ್ ಅನ್ನು ಪಶುವೈದ್ಯರು ಪರೀಕ್ಷಿಸಿ ತಾಯಿಯೊಂದಿಗೆ ಮತ್ತೆ ಸೇರಿಸಲಾಗಿದೆ ಎಂದರು.