ಚೆನ್ನೈ(ತಮಿಳುನಾಡು):ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಶುರು ಮಾಡಿ 13ನೇ ದಿನ ಕಳೆಯುತ್ತಾ ಬಂದಿದೆ. ಉಕ್ರೇನ್ನ ರಾಜಧಾನಿ ಕೀವ್, ಪ್ರಮುಖ ನಗರ ಖಾರ್ಕಿವ್ ಸೇರಿದಂತೆ ಬಹುತೇಕ ಎಲ್ಲ ನಗರಗಳ ಮೇಲೆ ರಷ್ಯಾ ಯೋಧರು ಸೆಲ್, ಬಾಂಬ್ ದಾಳಿ ನಡೆಸುತ್ತಿವೆ. ಹೀಗಾಗಿ ಸಾವಿರಾರು ನಾಗರಿಕರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ ಕೂಡ ಉಕ್ರೇನ್ ಯೋಧರು ತಿರುಗೇಟು ನೀಡುತ್ತಿದ್ದು, ಇಲ್ಲಿಯವರೆಗೆ ಹೋರಾಟ ಮಾತ್ರ ಕೈಚೆಲ್ಲಿಲ್ಲ.
ಇದರ ಮಧ್ಯೆ ತಮಿಳುನಾಡಿನ ಕೊಯಮತ್ತೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿ ಸೇರಿಕೊಂಡಿದ್ದಾನೆ. ರಷ್ಯಾ ವಿರುದ್ಧ ಹೋರಾಡಲು ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದು ಬಂದಿದ್ದು, ಉಕ್ರೇನ್ ಮಿಲಿಟರಿ ಪಡೆ ಸೇರ್ಪಡೆಯಾಗುವುದಕ್ಕೂ ಮುಂಚಿತವಾಗಿ ಈತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಕೆ ಮಾಡಿದ್ದು, ಅದು ತಿರಸ್ಕೃತಗೊಂಡ ಬಳಿಕ ಆತ ಈ ನಿರ್ಧಾರ ಕೈಗೊಂಡಿದ್ದಾನೆಂದು ತಿಳಿದು ಬಂದಿದೆ.