ಚೆನ್ನೈ(ತಮಿಳುನಾಡು):ರಾಜಕೀಯ ಅಂದ್ರೆ ಅದೊಂದು ಮಾಯೆ. ಅಧಿಕಾರದಾಸೆ ವ್ಯಕ್ತಿಯನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಚುನಾವಣೆಗಳಲ್ಲಿ ಜನರನ್ನು ಓಲೈಸಲು ರಾಜಕಾರಣಿಗಳು ಅನುಸರಿಸುವ ತಂತ್ರಗಳು ಯಾವಾಗಲೂ ಕೂಡಾ ನೂತನ, ವಿನೂತನ ಅಷ್ಟೇ ಅಲ್ಲ ವಿಚಿತ್ರವೂ ಆಗಿರುತ್ತವೆ. ಪ್ರಣಾಳಿಕೆಗಳ ಮೂಲಕ ಜನರನ್ನು ಓಲೈಸೋಕೆ ಮುಂದಾಗ್ತಿದ್ದ ಅಧಿಕಾರಾಕಾಂಕ್ಷಿಗಳು ಈಗ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
ಬಟ್ಟೆ ಒಗೆದರು, ಇಸ್ತ್ರಿ ಮಾಡಿದ್ರು, ದೋಸೆ ಹಾಕಿದ್ರು.. ವೋಟು ನಿಮಿತ್ತಂ ಬಹುಕೃತ ವೇಷಂ! - ಹೋಟೆಲ್ನಲ್ಲಿ ದೋಸೆ ಹಾಕಿದ ನಟಿ ಖುಷ್ಬೂ
ಚುನಾವಣೆಗಳಲ್ಲಿ ಜನರನ್ನು ಓಲೈಸಲು ರಾಜಕಾರಣಿಗಳು ಅನುಸರಿಸುವ ತಂತ್ರಗಳು ಯಾವಾಗಲೂ ಕೂಡಾ ನೂತನ, ವಿನೂತನ. ಪ್ರಣಾಳಿಕೆಗಳ ಮೂಲಕ ಜನರನ್ನು ಓಲೈಸೋಕೆ ಮುಂದಾಗ್ತಿದ್ದ ಅಧಿಕಾರಾಕಾಂಕ್ಷಿಗಳು ಈಗ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
ಬಟ್ಟೆ ಒಗೆಸಿ, ಇಸ್ತ್ರಿ ಮಾಡಿಸಿ, ದೋಸೆ ಹಾಕಿಸಿದ ಅಧಿಕಾರದಾಹ.!
ತಮಿಳುನಾಡಿನಲ್ಲಿ ಮತದಾರರ ಓಲೈಕೆ ಪರಿ ಅತಿರೇಖಕ್ಕೆ ಏರಿದೆ. ಇದಕ್ಕೆ ಇತ್ತೀಚೆಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಎಐಎಡಿಎಂಕೆ ಪಕ್ಷದ ನಾಗಪಟ್ಟಿಣಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಂಗಾ ಕಾತಿರವನ್ ಮಹಿಳೆಯ ಬಟ್ಟೆ ಒಗೆದು ಮತಯಾಚಿಸಿ ಗಮನ ಸೆಳೆದಿದ್ದಾರೆ.
ತಮಿಳುನಾಡಿ ಮೀನುಗಾರಿಕಾ ಖಾತೆ ಸಚಿವರಾದ ಮತ್ತು ರೋಯಾಪುರಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಿ.ಜಯಕುಮಾರ್ ಲಾಂಡ್ರಿ ಅಂಗಡಿಯೊಳಗೆ ನುಗ್ಗಿ ಇಸ್ತ್ರಿ ಮಾಡಿ ಮತಯಾಚನೆ ಮಾಡಿದರೆ, ನಟಿ ಖುಷ್ಬೂ ಹೋಟೆಲ್ನಲ್ಲಿ ದೋಸೆ ಹಾಕುವ ಮೂಲಕ ಮತದಾರರ ಓಲೈಕೆ ಮಾಡಿದ್ದಾರೆ.