ಚೆನ್ನೈ(ತಮಿಳುನಾಡು): ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾದ ಕೂನೂರು ಹೆಲಿಕಾಪ್ಟರ್ ದುರಂತದ ನಂತರ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಈ ಅನುಮಾನಗಳಿಗೆ ನಿಖರ ಉತ್ತರ ದೊರಕುವ ಸಾಧ್ಯತೆ ಇದೆ.
ವಿಂಗ್ ಕಮಾಂಡರ್ ಆರ್.ಭಾರದ್ವಾಜ್ ನೇತೃತ್ವದ ತಂಡ ದುರಂತ ನಡೆದ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹತ್ವದ ಮಾಹಿತಿ ನೀಡಬಹುದಾದ ರಷ್ಯಾ ನಿರ್ಮಿತ Mi-17V5 ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದಾರೆ.