ಚೆನ್ನೈ (ತಮಿಳುನಾಡು): ಅಧಿಕಾರಿಗಳು ಲಂಚ ಕೇಳಿದರೆ ಅಥವಾ ಸ್ವೀಕರಿಸಿದರೆ, ನೊಂದ ಸಾರ್ವಜನಿಕರು ದೂರು ಸಲ್ಲಿಕೆ ಮಾಡಿದರೆ, ಸಾಮಾನ್ಯವಾಗಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ಪೊಲೀಸರು ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಅದರಲ್ಲೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ತಿಳಿಸಿದಾಗ ಲಂಚದ ಹಣ ನೀಡುವಂತೆ ಹೇಳಿ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಅವರು ಕೇಳಿದ ಲಂಚದ ಹಣಕ್ಕೆ ಕೆಮಿಕಲ್ ಹಾಕಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಾರೆ.
Google Pay, Phone Pay ಹಾಗೂ Paytmನಂತಹ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಹಿವಾಟುಗಳಲ್ಲಿ ಲಂಚವನ್ನು ಸ್ವೀಕರಿಸುವುದರಿಂದ ಇದನ್ನು ಕಂಡುಹಿಡಿಯುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಲಂಚವನ್ನು ಸಾಬೀತು ಪಡಿಸುವುದು ಕೂಡ ಕಷ್ಟ ಎನ್ನುತ್ತಾರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು.
ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ಮಾಹಿತಿ:ಕಳೆದ 4 ವರ್ಷಗಳಲ್ಲಿ ಚೆನ್ನೈನಲ್ಲಿ ಮಾತ್ರ, 2019ರಲ್ಲಿ 74 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16 ಎಂಟ್ರಾಮೆಂಟ್ ಮತ್ತು 67 ಪ್ರಕರಣಗಳು 2020ರಲ್ಲಿ ದಾಖಲಾಗಿವೆ. ಜೊತೆಗೆ 18 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2021ರಲ್ಲಿ 44 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16 ಪ್ರಕರಣಗಳನ್ನು ಅಧಿಕಾರಿಗಳನ್ನು ಬಲೆಗೆ ಬೀಳಿಸಿ ದಾಖಲಿಸಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಕಳೆದ ವರ್ಷವೂ 39 ಪ್ರಕರಣಗಳು ಮತ್ತು 6 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ ಎಂಬುದು ಗಮನಾರ್ಹ. ಈ 4 ವರ್ಷಗಳಲ್ಲಿ ದಾಖಲಾದ ಪ್ರಕರಣಗಳನ್ನು ಹೋಲಿಸಿದರೆ ಈ ವರ್ಷ ಮೇ ತಿಂಗಳವರೆಗೆ ಚೆನ್ನೈ ಒಂದರಲ್ಲೇ 11 ಕೇಸ್ಗಳು ದಾಖಲಾಗಿವೆ. ಅಲ್ಲದೆ, ಮಾರ್ಚ್ ನಲ್ಲಿ ಪಲ್ಲವರಂನಲ್ಲಿ ರಿಜಿಸ್ಟ್ರಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಲಂಚವು ಡಿಜಿಟಲ್ ಆಗಿ ಹೋಗಿದೆ. ಇದರಿಂದ ಕಡಿಮೆ ದರದಲ್ಲಿ ಕೇಸ್ಗಳು ವರದಿಯಾಗುತ್ತಿವೆ ಎಂದು ಅವರು ಹೇಳುತ್ತಾರೆ.