ಚೆನ್ನೈ(ತಮಿಳುನಾಡು):ಇಂಗ್ಲಿಷ್ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆ ಮಾಡುವಂತೆ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆಗೆ ಈಗಾಗಲೇ ಸಾಕಷ್ಟು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿದ್ದು, ಗೃಹ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಿಂದಿ ಹೇರಿಕೆಗೆ ತಮಿಳುನಾಡು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದಿರುವ ಅಣ್ಣಾಮಲೈ, ರಾಜ್ಯ ಬಿಜೆಪಿ ಘಟಕ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತದಲ್ಲಿ ತಮಿಳು ಸಂಪರ್ಕ ಭಾಷೆಯಾದರೆ, ನಾವು ಹೆಮ್ಮೆ ಪಡುತ್ತೇವೆ. ಭಾರತೀಯರು ಎಂದು ಸಾಬೀತುಪಡಿಸಲು ನಾವು ಬಲವಂತವಾಗಿ ಹಿಂದೆ ಭಾಷೆ ಕಲಿಯುವ ಅಗತ್ಯವಿಲ್ಲ ಎಂದಿದ್ದು, ನಮ್ಮಲ್ಲಿ ಯಾರೂ ಸಹ ಹಿಂದಿ ಮಾತನಾಡುವುದಿಲ್ಲ. ಆದರೆ, ವೃತ್ತಿ, ವ್ಯಾಪಾರ ಅಥವಾ ಶಿಕ್ಷಣದ ಭಾಗವಾಗಿ ಕಲಿಯಲು ಬಯಸಿದರೆ ನಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು. ಕಳೆದ 40-45 ವರ್ಷಗಳಿಂದ ಕಾಂಗ್ರೆಸ್ ಹಿಂದೆ ಭಾಷೆ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಎಂದರು.