ತಿರುಚ್ಚಿ (ತಮಿಳುನಾಡು) :ಸಮಯಪುರಂನಲ್ಲಿ ಬಾಲಕನೋರ್ವ ನೂಡಲ್ಸ್ ತಿಂದು ಸಾವಿಗೀಡಾಗಿದ್ದಾನೆ. ಶೇಕರ್ ಹಾಗೂ ಮಹಾಲಕ್ಷ್ಮಿ ದಂಪತಿಯ 2 ವರ್ಷದ ಪುತ್ರ ಸಾಯಿ ತರುಣ್ ಸಾವಿಗೀಡಾದ ಬಾಲಕ.
ಬಾಲಕ ಅಲರ್ಜಿಯಿಂದ ಬಳಲುತ್ತಿದ್ದನಂತೆ ಆದ್ದರಿಂದ ಆತನಿಗೆ ಔಷಧಿ ನೀಡಲಾಗುತ್ತಿತ್ತು. ಇದರ ನಡುವೆಯೇ (ಜೂನ್ 17) ರಾತ್ರಿ ಬಾಲಕನ ತಾಯಿ ನೂಡಲ್ಸ್ ಬೇಯಿಸಿ ತಿನ್ನಲು ನೀಡಿದ್ದಾರೆ. ಹಾಗೆ ಉಳಿದ ನೂಡಲ್ಸ್ ಅನ್ನು ಫ್ರಿಡ್ಜ್ನಲ್ಲಿ ಇರಿಸಿದ್ದಾರೆ. ಮರುದಿನ ಶನಿವಾರ (ಜೂನ್ 18) ಮಹಾಲಕ್ಷ್ಮಿ ತರುಣ್ ಗೆ ತಿಂಡಿಗೆ ಅದೇ ನೂಡಲ್ಸ್ ಕೊಟ್ಟಿದ್ದಾಳೆ. ಇದನ್ನು ತಿಂದಿದ್ದೇ ತಡ, ತರುಣ್ ಅಸ್ವಸ್ಥನಾಗಿದ್ದಾನೆ. ಸಂಜೆ ಮನೆಯಲ್ಲಿ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದ ನಂತರ ಸಮೀಪದ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.