ಪುದುಚೇರಿ:ಕಿರಣ್ ಬೇಡಿ ಪದಚ್ಯುತಿ ಬಳಿಕ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರ್ರಾಜನ್ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ತಮಿಳಿಸೈ ಅವರಿಗೆ ರಾಜಭವನದಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಪ್ರಮಾಣವಚನ ಬೋಧಿಸಿದ್ದಾರೆ. ಪುದುಚೇರಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮಿಳು ಮಾತನಾಡುವ ವ್ಯಕ್ತಿಯನ್ನು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ಪದಚ್ಯುತಿ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ, ಸ್ಪೀಕರ್ ಶಿವಕೋಲುಂಟು, ಪ್ರತಿಪಕ್ಷದ ನಾಯಕ ಎನ್ ರಂಗಸ್ವಾಮಿ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ತಮಿಳಿಸೈ ಸೌಂದರ್ರಾಜನ್ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ 26ನೇ ಲೆಫ್ಟಿನೆಂಟ್ ಗವರ್ನರ್ ಮತ್ತು ಐದನೇ ಮಹಿಳಾ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ತೆಲಂಗಾಣದೊಂದಿಗೆ ಪುದುಚೇರಿಯ ಹೆಚ್ಚುವರಿ ಜವಾಬ್ದಾರಿ ತಮಿಳಿಸೈ ಹೆಗಲಿಗೆ ಬಿದ್ದಿದೆ.