ಕರ್ನಾಟಕ

karnataka

ETV Bharat / bharat

ಪತ್ರಕರ್ತರ ವಿರುದ್ಧ ದಾಖಲಾಗಿದ್ದ 90 ಪ್ರಕರಣ ಹಿಂತೆಗೆದುಕೊಂಡ ಸ್ಟಾಲಿನ್ ಸರ್ಕಾರ - ತಮಿಳುನಾಡು ಸರ್ಕಾರ

ರಾಜ್ಯದ ಪತ್ರಕರ್ತರು, ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ದಾಖಲಾದ ಮಾನಹಾನಿ ಆರೋಪ ಸೇರಿದಂತೆ 90 ಪ್ರಕರಣಗಳನ್ನು ಹಿಂಪಡೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.

ಸಿಎಂ ಎಂಕೆ ಸ್ಟಾಲಿನ್ ಸರ್ಕಾರ
ಸಿಎಂ ಎಂಕೆ ಸ್ಟಾಲಿನ್ ಸರ್ಕಾರ

By

Published : Jul 29, 2021, 9:08 PM IST

ಚೆನ್ನೈ: ಮಾನಹಾನಿ ಪ್ರಕರಣಗಳು ಸೇರಿದಂತೆ ರಾಜ್ಯದ ಪತ್ರಕರ್ತರು, ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ ಒಟ್ಟು 90 ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

ಅಧಿಕೃತ ಹೇಳಿಕೆಯ ಪ್ರಕಾರ, 2012 ರಿಂದ ಫೆಬ್ರವರಿ 2021 ರವರೆಗೆ ದೈನಂದಿನ ಮತ್ತು ಸಾಪ್ತಾಹಿಕ ಪತ್ರಿಕೆಗಳ ಸಂಪಾದಕರ ವಿರುದ್ಧ ಮಾನಹಾನಿಕರ ಭಾಷಣ ಮತ್ತು ಸುದ್ದಿ ಬಿಡುಗಡೆಗಾಗಿ ಸುಮಾರು 90 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದಿ ಹಿಂದೂ ಸಂಪಾದಕರ ವಿರುದ್ಧ ನಾಲ್ಕು ಪ್ರಕರಣಗಳು, ಟೈಮ್ಸ್ ಆಫ್ ಇಂಡಿಯಾದ ಸಂಪಾದಕರ ವಿರುದ್ಧ ಐದು ಪ್ರಕರಣಗಳು ಮತ್ತು ಎಕನಾಮಿಕ್ ಟೈಮ್ಸ್ ದೈನಂದಿನ ಸಂಪಾದಕರ ವಿರುದ್ಧ ಒಂದು ಪ್ರಕರಣಗಳು ಸೇರಿವೆ.

ದಿನಮಲಾರ್ ದಿನಪತ್ರಿಕೆಯ ಸಂಪಾದಕರ ವಿರುದ್ಧ 12 ಪ್ರಕರಣಗಳು, ಆನಂದ ವಿಕಟನ ವಾರಪತ್ರಿಕೆಯ ಸಂಪಾದಕರ ವಿರುದ್ಧ ಒಂಬತ್ತು ಪ್ರಕರಣಗಳು, ವಿಕಟನ್ ಪತ್ರಿಕೆಯ ಸಂಪಾದಕರ ವಿರುದ್ಧ 11 ಪ್ರಕರಣಗಳು, ನಕ್ಕೀರನ್ ಪತ್ರಿಕೆಯ ಸಂಪಾದಕರ ವಿರುದ್ಧ 23 ಪ್ರಕರಣಗಳು, ಮುರಸೋಲಿ ದಿನಪತ್ರಿಕೆಯ ಸಂಪಾದಕರ ವಿರುದ್ಧ 17 ಪ್ರಕರಣಗಳು ಮತ್ತು ದಿನಕರನ್ ಸಂಪಾದಕರ ವಿರುದ್ಧ ನಾಲ್ಕು ಪ್ರಕರಣಗಳಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾನಹಾನಿ ಪ್ರಕರಣಗಳ ಆರೋಪ ಹೊತ್ತಿರುವ ಟಿವಿ 7, ನ್ಯೂಸ್ 7, ಸತ್ಯಂ ಟಿವಿ, ಕ್ಯಾಪ್ಟನ್ ಟಿವಿ, ಎನ್‌ಡಿಟಿವಿ, ಟೈಮ್ಸ್ ನೌ ನ ಸಂಪಾದಕರು ಮತ್ತು ಕಲಾವಿದರನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಎಂ.ಕೆ.ಸ್ಟಾಲಿನ್ ಅವರು ಡಿಎಂಕೆ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details