ಕರ್ನಾಟಕ

karnataka

ETV Bharat / bharat

ಕಡಿಮೆ ಬಜೆಟ್​ನಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನ ತಯಾರಿಸಿದ ತಮಿಳುನಾಡಿನ ವಿದ್ಯಾರ್ಥಿ - ಮಾಲಿನ್ಯ ಅಳೆಯುವ ಸಾಧನ

ಕಡಿಮೆ ವೆಚ್ಚದ, ವಾಯು ಮಾಲಿನ್ಯ ಅಳೆಯುವ ಸಾಧನ ತಯಾರಿಸಿದ ಚಹಾ ಮಾರುವವನ ಮಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

Karur Tea Master Son create Low-Cost Satellite Revolutionizes Air Pollution Monitoring
Karur Tea Master Son create Low-Cost Satellite Revolutionizes Air Pollution Monitoring

By ETV Bharat Karnataka Team

Published : Nov 16, 2023, 6:49 PM IST

ತಮಿಳುನಾಡಿನ ಕರೂರ್ ಜಿಲ್ಲೆಯ ಚಹಾ ಮಾರುವವನ ಮಗನೊಬ್ಬ ಅತ್ಯಂತ ಕಡಿಮೆ ಬಜೆರ್ಟ್​ನಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಚಹಾ ಮಾರುವವನ ಪುತ್ರ 16 ವರ್ಷದ ಜಯಪ್ರಕಾಶ್ ಎಂಬಾತ ಕಡಿಮೆ ಬಜೆಟ್ ಉಪಗ್ರಹವನ್ನು ಬಳಸಿಕೊಂಡು ವಾಯುಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಆಧುನಿಕ ಸಾಧನ ತಯಾರಿಸಿದ್ದಾರೆ. ವಿಜ್ಞಾನ ಶಿಕ್ಷಕ ರಾಮಚಂದ್ರನ್ ಮತ್ತು ಪರಣಿ ಶಾಲಾ ಗುಂಪಿನ ಪ್ರಾಂಶುಪಾಲ ಡಾ.ರಾಮಸುಬ್ರಹ್ಮಣ್ಯಂ ಅವರು ಈ ಹದಿಹರೆಯದ ವಿಜ್ಞಾನಿಗೆ ಮಾರ್ಗದರ್ಶನ ಮಾಡಿದ್ದಾರೆ.

ಜಯಪ್ರಕಾಶ್ ತಮ್ಮ ಜಾಣ್ಮೆಯಿಂದ ಭೂಮಿಯ ಮೇಲ್ಮೈಯಿಂದ 10 ರಿಂದ 20 ಕಿಲೋಮೀಟರ್ ಒಳಗೆ ಟ್ರೋಪೋಸ್ಪಿಯರ್​ನಲ್ಲಿ ವಾಯುಮಾಲಿನ್ಯದ ಮಟ್ಟವನ್ನು ಪತ್ತೆಹಚ್ಚಬಹುದಾದ ಸಣ್ಣ ಉಪಗ್ರಹ ಅಭಿವೃದ್ಧಿಪಡಿಸಿದ್ದಾನೆ. ಕೋಟಿ ವೆಚ್ಚದ ಸಾಂಪ್ರದಾಯಿಕ ಉಪಗ್ರಹಗಳಿಗಿಂತ ಭಿನ್ನವಾಗಿ ಇದು ಕೇವಲ ಒಂದು ಸಾವಿರ ರೂಪಾಯಿಗಳ ಅಲ್ಪ ಬಜೆಟ್​ನಲ್ಲಿ ಉಪಗ್ರಹದ ಕಾರ್ಯಗಳನ್ನು ಮಾಡುತ್ತದೆ.

ಈಟಿವಿ ಭಾರತ್ ತಮಿಳುನಾಡಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜಯಪ್ರಕಾಶ್, ತನ್ನ ಉಪಗ್ರಹ ಮೂಲಭೂತವಾಗಿ ಹೀಲಿಯಂ ಬಲೂನ್, ಸಾಂಪ್ರದಾಯಿಕ ಬಾಹ್ಯಾಕಾಶಕ್ಕೆ ಹಾರಿಬಿಡಲಾಗುವ ಉಪಗ್ರಹಗಳಿಗೆ ವೆಚ್ಚ- ಪರಿಣಾಮಕಾರಿ ಪರ್ಯಾಯ ವಿಧಾನವಾಗಿದೆ ಎಂದರು. ಇಡೀ ಯೋಜನೆಗೆ ಸುಮಾರು ಮೂವತ್ತು ಸಾವಿರ ರೂಪಾಯಿಗಳ ವೆಚ್ಚವಾಗುತ್ತದೆ. ಇದರ ಮೂಲಕ ಕೈಗೆಟುಕುವ ದರದಲ್ಲಿ ಕೈಗಾರಿಕಾ ಮಾಲಿನ್ಯದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ.

ಅತಿಯಾದ ವಾಯುಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳು ಹೊರಸೂಸುವ ಅನಿಲಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಸಣ್ಣ ಪ್ರಮಾಣದ ಉಪಗ್ರಹವು ಮಾಲಿನ್ಯ ನಿಯಂತ್ರಣದ ವಿಚಾರದಲ್ಲಿ ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಜಯಪ್ರಕಾಶ್ ಅವರ ಆವಿಷ್ಕಾರವು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ವಾಯು ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಪ್ರಾಯೋಗಿಕ ಮತ್ತು ವೆಚ್ಚ- ಪರಿಣಾಮಕಾರಿ ಪರಿಹಾರ ಒದಗಿಸಬಲ್ಲದು.

ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಜಯಪ್ರಕಾಶ್, ವಾಯುಮಾಲಿನ್ಯವನ್ನು ಎದುರಿಸುವ ಮೂಲಕ ಮತ್ತು ಮಾಲಿನ್ಯ ಮುಕ್ತ ಜಗತ್ತಿಗೆ ಕೊಡುಗೆ ನೀಡುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಗುರಿಯೊಂದಿಗೆ ಇಸ್ರೋ ವಿಜ್ಞಾನಿಯಾಗಲು ಬಯಸುವುದಾಗಿ ಹೇಳಿದರು. ಹಣಕಾಸಿನ ಸಮಸ್ಯೆಗಳ ಹೊರತಾಗಿಯೂ, ಇವರು ತಮ್ಮ ಶಾಲೆಯಲ್ಲಿ ಗ್ರಿಫಾನ್ ಏರೋ ಸ್ಪೇಸ್ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ. ವೈಜ್ಞಾನಿಕ ಆವಿಷ್ಕಾರಗಳಲ್ಲಿ ಬಳಸುವ ಉಪಗ್ರಹ ವಿಧಾನಗಳು ಮತ್ತು ಉಪಕರಣಗಳ ಬಗ್ಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಿದ್ದಾರೆ.

ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಜಯಪ್ರಕಾಶ್ ಅವರ ಹೀಲಿಯಂ ಬಲೂನ್ ಉಪಗ್ರಹವನ್ನು ಪ್ರದರ್ಶಿಸಲಾಗುವುದು ಎಂದು ಭರಣಿ ಶಿಕ್ಷಣ ಸಮೂಹದ ಪ್ರಾಂಶುಪಾಲ ಡಾ. ರಾಮಸುಬ್ರಮಣಿಯನ್ ಹೇಳಿದರು. ಇಸ್ರೋದ ಬೆಂಗಳೂರು ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಮೈಲಸ್ವಾಮಿ ಅಣ್ಣಾದೊರೈ ಅವರು ಜಯಪ್ರಕಾಶ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಸ್ತುತ ವಾಯುಮಾಲಿನ್ಯಕ್ಕೆ ಕಾರಣವಾಗುವ ಇತರ ಅನಿಲಗಳನ್ನು ಪತ್ತೆಹಚ್ಚಲು ಆವೃತ್ತಿ 2 ಮಿನಿ ಉಪಗ್ರಹವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಜಯಪ್ರಕಾಶ್ ಅವರ ಪ್ರಯತ್ನವನ್ನು ಬೆಂಬಲಿಸಲು ಮತ್ತು ಪೋಷಿಸಲು ಶಿಕ್ಷಣ ಸಂಸ್ಥೆ ಸಜ್ಜಾಗಿದೆ.

ಇದನ್ನೂ ಓದಿ : ಮಾನವರಂತೆ ಮಾತನಾಡುವ ಟೆಕ್ಸ್ಟ್​ ಟು ಸ್ಪೀಚ್​ ಪರಿಚಯಿಸಿದ ಮೈಕ್ರೊಸಾಫ್ಟ್​

ABOUT THE AUTHOR

...view details