ಚೆನ್ನೈ, ತಮಿಳುನಾಡು: ಇಲ್ಲಿನ ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ದಾರುಣ ಘಟನೆ ನಡೆದಿದೆ. ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಂದೆ ಮಾಣಿಕ್ಯಂ (47) ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗಳು ಸತ್ಯ (20) ನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷ ಓದುತ್ತಿದ್ದರು. ಆದಂಬಾಕ್ಕಂನ ಸತೀಶ್ (23) ಎಂಬ ಯುವಕ ಸತ್ಯಳನ್ನು ಪ್ರೀತಿಸುತ್ತಿದ್ದ. ಎಂದಿನಂತೆ ಪರಿಂಗಿಮಲೈ ಕಾಲೇಜಿಗೆ ಹೋಗಲು ರೈಲ್ವೇ ನಿಲ್ದಾಣದಲ್ಲಿ ಸತ್ಯ ನಿಂತಿದ್ದಾರೆ. ಆಗ ಅಲ್ಲಿಗೆ ಬಂದ ಸತೀಶ್, ಸತ್ಯ ಜತೆ ಜಗಳವಾಡಿದ್ದಾನೆ. ಬಳಿಕ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ದಾನೆ. ಈ ವೇಳೆ ಸತ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.