ಚೆನ್ನೈ:ದಿಂಡಿಗಲ್ ಮತ್ತು ಕರೂರ್ ಜಿಲ್ಲೆಗಳಲ್ಲಿ 11,000 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ ಜಾಗದಲ್ಲಿ ಭಾರತದ ಮೊದಲ ಸ್ಲೆಂಡರ್ ಲೋರಿಸ್ ಅಭಯಾರಣ್ಯ ಸ್ಥಾಪಿಸಲು ತಮಿಳುನಾಡು ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಸಂಬಂಧ ಟ್ವೀಟ್ ಮಾಡಿದ್ದು, ವನ್ಯಜೀವಿ ಸಂರಕ್ಷಣಾ ಪ್ರಯತ್ನದಲ್ಲಿ ಇದು ರಾಜ್ಯದ ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.
ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ 11,806 ಹೆಕ್ಟೇರ್ ಪ್ರದೇಶದಲ್ಲಿ ಭಾರತದ ಮೊದಲ "ಕಡವೂರ್ ಸ್ಲೆಂಡರ್ ಲೋರಿಸ್ ಅಭಯಾರಣ್ಯ" ವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಸೂಚಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ. ಸ್ಲೆಂಡರ್ ಲೋರಿಸ್ ಸಂರಕ್ಷಣೆಯಲ್ಲಿ ಅಭಯಾರಣ್ಯವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರ ಸಂರಕ್ಷಣಾ ಪ್ರಯತ್ನದಲ್ಲಿ ಇದು ಮತ್ತೊಂದು ಮೈಲಿಗಲ್ಲು" ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಚಿಕ್ಕದಾಗಿರುವ ಲೋರಿಸ್ಗಳು ಸಸ್ತನಿಗಳಾಗಿವೆ. ಅವು ತಮ್ಮ ಜೀವನದ ಬಹುಪಾಲು ಸಮಯ ಮರಗಳ ಮೇಲೆಯೇ ಕಳೆಯುತ್ತವೆ. ಇವು ಕೃಷಿ ಭೂಮಿಯಲ್ಲಿನ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಉಪಯೋಗಕಾರಿಯಾಗಿವೆ. ಭೂಮಂಡಲದ ಪರಿಸರ ವ್ಯವಸ್ಥೆಯಲ್ಲಿ ಈ ಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ.