ಕರ್ನಾಟಕ

karnataka

ETV Bharat / bharat

ನೀಟ್‌ನಲ್ಲಿ ಕಡಿಮೆ ಅಂಕ: ಆತ್ಮಹತ್ಯೆಗೆ ಶರಣಾದ ಸುಭಾಷ್‌ಚಂದ್ರ ಬೋಸ್ - NEET result suicide

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ವೈದ್ಯಕೀಯ ಕೋರ್ಸ್​ಗೆ ಅವಕಾಶ ಸಿಗುವುದಿಲ್ಲ ಎಂದು ಬೇಸರ ಪಟ್ಟುಕೊಂಡ ವಿದ್ಯಾರ್ಥಿಯೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tamil Nadu Medical aspirant dies by suicide over NEET result
NEET Result: ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ ಮೆಡಿಕಲ್ ಕೋರ್ಸ್​ ಆಕಾಂಕ್ಷಿ ಆತ್ಮಹತ್ಯೆ

By

Published : Nov 6, 2021, 5:37 PM IST

ಸೇಲಂ(ತಮಿಳುನಾಡು):ನೀಟ್ ಪರೀಕ್ಷೆಯಲ್ಲಿ (NEET Exam) ಕಡಿಮೆ ಅಂಕಗಳನ್ನು ಪಡೆದ ಕಾರಣದಿಂದ ಬೇಸತ್ತ ಮೆಡಿಕಲ್ ಕೋರ್ಸ್ ಆಕಾಂಕ್ಷಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಸೇಲಂನ ವಡಗುಮರೈ ಗ್ರಾಮದವನಾದ ಸುಭಾಷ್​​ಚಂದ್ರ ಬೋಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೆಂಬರ್ 1ರಂದು ಈತ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಪೋಷಕರು ಆತನನ್ನು ಅತೂರ್​ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.

ನಂತರ ವೈದ್ಯರ ಸಲಹೆಯ ಮೇರೆಗೆ ಬೋಸ್​​ನನ್ನು ಸೇಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೋಸ್ ಶನಿವಾರ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ತಮಿಳುನಾಡಿನಲ್ಲಿ ಈವರೆಗೂ ನೀಟ್ ಪರೀಕ್ಷೆ ಬರೆದಿದ್ದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ರೈಲು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ABOUT THE AUTHOR

...view details