ಕರ್ನಾಟಕ

karnataka

ETV Bharat / bharat

ಸಾಕು ನಾಯಿಯಿಂದ ಮಾಲೀಕನಿಗೆ ನಾಯಿಪಾಡು: ನಾಯಿ ಸಾಕೋರಿಗೆ ಇದು ಎಚ್ಚರಿಕೆ..! - ನಾಯಿ ಮಾಲೀಕನ ಬಂಧಿಸಿದ ಪೊಲೀಸರು

ಬಾಲಕಿಯನ್ನು ನಾಯಿಯೊಂದು ಕಚ್ಚಿದ್ದು, ಆ ಸಾಕು ನಾಯಿಯ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Dog owner arrested
ನಾಯಿ ಮಾಲೀಕನ ಬಂಧನ

By

Published : Nov 29, 2020, 4:12 PM IST

ಸೇಲಂ (ತಮಿಳುನಾಡು): ಸಾಕು ನಾಯಿಯೊಂದು ಬಾಲಕಿಯನ್ನು ಕಚ್ಚಿದ ಕಾರಣಕ್ಕೆ ನಾಯಿಯ ಮಾಲೀಕನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಸೇಲಂ ಬಳಿ ನಡೆದಿದೆ.

ಕಣ್ಣಂಕುರಿಚಿ ಎಂಬ ಪ್ರದೇಶದಲ್ಲಿ ವಾಸವಾಗಿರುವ ಪ್ರಭಾಕರನ್ ಬಂಧಿತನಾದ ವ್ಯಕ್ತಿಯಾಗಿದ್ದು, ಹರಿ ವಿಘ್ನೇಶ್ ಎಂಬಾತ ತನ್ನ ಸಹೋದರಿಯೊಂದಿಗೆ ಅಂಗಡಿಗೆ ತೆರಳುತ್ತಿದ್ದಾಗ ಬಾಲಕಿಯ ಮೇಲೆ ನಾಯಿ ದಾಳಿ ಮಾಡಿದೆ.

ಸ್ಥಳೀಯರು ನಾಯಿಯನ್ನು ಓಡಿಸಿದ್ದು, ಬಾಲಕಿಗೆ ಸಾಕಷ್ಟು ಗಾಯಗಳಾಗಿವೆ. ಈ ವೇಳೆ ಬಾಲಕಿಯ ಕುಟುಂಬಸ್ಥರು ಪ್ರಭಾಕರನ್ ಮನೆಗೆ ತೆರಳಿ ಪ್ರಶ್ನಿಸಿದ್ದು, ಪ್ರಭಾಕರನ್ ಸರಿಯಾಗಿ ಸ್ಪಂದಿಸದ ಕಾರಣ ಕಣ್ಣಂಕುರಿಚಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಾಯಿ ಮಾಲೀಕರ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಪ್ರಭಾಕರನ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈಗ ಸದ್ಯಕ್ಕೆ ಪ್ರಭಾಕರನ್​​ನನ್ನು 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಭಾರತೀಯ ದಂಡ ಸಂಹಿತೆಯಲ್ಲಿನ ಹಲ್ಲೆ, ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಹಾಗೂ ಬೆದರಿಕೆ ಮುಂತಾದ ಆರೋಪಗಳನ್ನು ಹೊರೆಸಲಾಗಿದೆ.

ABOUT THE AUTHOR

...view details