ಕರ್ನಾಟಕ

karnataka

ETV Bharat / bharat

ಜಾತಿ ಆಧಾರಿತ ಜನಗಣತಿಗೆ ತಮಿಳುನಾಡು ಸರ್ಕಾರ ಅಸ್ತು - ಡಿಎಂಕೆ ವರ್ಷಗಳಿಂದ ಜಾತಿ ಆಧಾರಿತ ಜನಗಣತಿಗೆ

ತಮಿಳುನಾಡಿನಲ್ಲಿ ಜಾತಿ ಆಧಾರಿತ ಜನಗಣತಿ - ಡಿಎಂಕೆ ಸರ್ಕಾರದಿಂದ ತಾತ್ವಿಕ ನಿರ್ಧಾರ- ಡಿಎಂಕೆ ಉಪ ಕಾರ್ಯದರ್ಶಿ ಮತ್ತು ಸಂಸದೆ ಕನಿಮೊಳಿ ಹೇಳಿಕೆ

Caste census will make case for higher reservations stronger DMK
Caste census will make case for higher reservations stronger DMK

By

Published : Feb 12, 2023, 6:17 PM IST

ಚೆನ್ನೈ(ತಮಿಳುನಾಡು) : ರಾಜ್ಯದ ವಿವಿಧ ಸಮುದಾಯಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಸರ್ಕಾರವು ಜಾತಿ ಆಧಾರಿತ ಜನಗಣತಿ ನಡೆಸಲು ಮುಂದಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ರಾಜ್ಯದಲ್ಲಿನ ಸರ್ಕಾರಿ ಸೇವೆಯಲ್ಲಿನ ನೇಮಕಾತಿಗಳಿಗೆ ಶೇ 69ರಷ್ಟು ಕೋಟಾ ಜಾರಿಗೊಳಿಸಲು ಮತ್ತು ರಕ್ಷಿಸಲು ಸರ್ಕಾರವು ಬದ್ಧವಾಗಿದೆ ಎಂದು ತಮಿಳುನಾಡು ಸರ್ಕಾರವು ನೀತಿ ಟಿಪ್ಪಣಿಯಲ್ಲಿ ತಿಳಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈಗಾಗಲೇ ಜಾತಿವಾರು ಜನಗಣತಿಗೆ ಆಗ್ರಹಿಸಿದ್ದಾರೆ.

ವಿರೋಧ ಪಕ್ಷ ಎಐಎಡಿಎಂಕೆ ತನ್ನ ಹಿಂದಿನ ಅಧಿಕಾರಾವಧಿಯಲ್ಲಿ ಜಾತಿಗಳು, ಸಮುದಾಯಗಳು ಮತ್ತು ಬುಡಕಟ್ಟುಗಳ ಮೇಲೆ ಪ್ರಮಾಣೀಕರಿಸಬಹುದಾದ ದತ್ತಾಂಶಗಳ ಸಂಗ್ರಹಕ್ಕಾಗಿ ಆಯೋಗವನ್ನು ಸ್ಥಾಪಿಸಿತ್ತು ಮತ್ತು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎ. ಕುಲಶೇಖರನ್ ಅವರನ್ನು ಈ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಎಐಎಡಿಎಂಕೆಯ ಮಿತ್ರ ಪಕ್ಷವಾದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಯ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಆಯೋಗವನ್ನು ರಚಿಸಲಾಗಿದೆ.

ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಸರ್ಕಾರ ಕೂಡ ಜಾತಿ ಆಧಾರಿತ ಜನಗಣತಿಗೆ ವಿರುದ್ಧವಾಗಿಲ್ಲ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಂ ಕೆ ಸ್ಟಾಲಿನ್ ಅವರ ತಂದೆ ದಿವಂಗತ ಎಂ ಕರುಣಾನಿಧಿ ಅವರು ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಆಧಾರಿತ ಜನಗಣತಿ ಅಗತ್ಯ ಎಂದು ಖಡಾಖಂಡಿತವಾಗಿ ಹೇಳಿದ್ದರು. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇರುವವರೆಲ್ಲರ ಅಪೇಕ್ಷೆಯಂತೆ ಜಾತಿ ಆಧಾರಿತ ಜನಗಣತಿಯನ್ನು ತಾನೇ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಎಂ. ಕರುಣಾನಿಧಿ ಅವರ ಪುತ್ರಿ ಮತ್ತು ಎಂ.ಕೆ. ಸ್ಟಾಲಿನ್ ಅವರ ಸಹೋದರಿಯಾಗಿರುವ, ಡಿಎಂಕೆ ಉಪ ಕಾರ್ಯದರ್ಶಿ ಮತ್ತು ಸಂಸದೆ ಕನಿಮೊಳಿ ಕರುಣಾನಿಧಿ ಕೂಡ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ. ಇದೇ ವೇಳೆ ಜನರು ಜಾತಿ ಆಧಾರಿತ ಸಂಯೋಜನೆಗಳ ಬಗ್ಗೆ ತಿಳಿಯಲು ಇನ್ನೂ ಒಂದು ದಶಕದವರೆಗೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂಕಿಅಂಶಗಳಿಲ್ಲದೆ ಸಮಾಜದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕನಿಮೊಳಿ ಹೇಳಿದ್ದಾರೆ. ಹಿಂದುಳಿದ ಸಮುದಾಯಗಳ ಕಲ್ಯಾಣವು ಜಾತಿ ಆಧಾರಿತ ವರದಿಯೊಂದಿಗೆ ಸಂಬಂಧ ಹೊಂದಿದೆ ಎಂದು ಭಾವಿಸುವ ಡಿಎಂಕೆ ವರ್ಷಗಳಿಂದ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದೆ.

ವಿವಿಧ ಸಮುದಾಯಗಳಿಗೆ ಒದಗಿಸಿದ ಮೀಸಲಾತಿಗಳನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಡಿಎಂಕೆ ಮತ್ತು ಇತರ ರಾಜಕೀಯ ಪಕ್ಷಗಳು ಜಾತಿ ಆಧಾರಿತ ಜನಗಣತಿಗಾಗಿ ಒತ್ತಾಯಿಸುತ್ತಿವೆ. ಈ ವಿಷಯದಲ್ಲಿ ಪ್ರಬಲ ವನ್ನಿಯಾರ್ ಸಮುದಾಯದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಮೇಲುಗೈ ಸಾಧಿಸಿ ರಾಜಕೀಯ ಲಾಭ ಪಡೆಯಬಹುದು ಎಂಬ ಭಯದಿಂದ ಡಿಎಂಕೆ ಮತ್ತು ಕನಿಮೊಳಿ ಸೇರಿದಂತೆ ಅದರ ನಾಯಕರು ಜನಗಣತಿಗಾಗಿ ಒತ್ತಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಾತಿ ಆಧಾರಿತ ಜನಗಣತಿ ಕಾರ್ಯಸಾಧುವಲ್ಲ ಎಂದು ಕೇಂದ್ರ ಸರ್ಕಾರ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಡಿಎಂಕೆ ಮತ್ತು ಎಐಎಡಿಎಂಕೆ ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುತ್ತವೆ. ಸೆಮಿನಾರ್‌ಗಳಲ್ಲಿ ಮಾತನಾಡುವುದು ಮತ್ತು ಮುಖ್ಯಮಂತ್ರಿ ಮತ್ತು ಇತರ ನಾಯಕರು ಸಾಂದರ್ಭಿಕವಾಗಿ ಹೇಳಿಕೆಗಳನ್ನು ನೀಡುವುದಕ್ಕೆ ಮಾತ್ರ ಈ ಬೆಂಬಲ ಸೀಮಿತವಾಗಿದೆ. ಆದರೆ ಈ ವಿಚಾರದಲ್ಲಿ ಎರಡೂ ಪಕ್ಷಗಳು ದೊಡ್ಡಮಟ್ಟದ ಧ್ವನಿ ಎತ್ತಿಲ್ಲ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ನಿಜವಾದ ಸಂಖ್ಯೆ ತಿಳಿದರೆ ಪಕ್ಷವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಶೇಕಡಾ 50 ರ ಮೀಸಲಾತಿ ಮಿತಿಯನ್ನು ದಾಟಲು ಸಾಧ್ಯವಾಗುತ್ತದೆ ಎಂದು ಡಿಎಂಕೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ರಾಜಕೀಯ ನಾಯಕರ ಅತಿರೇಕದ ವರ್ತನೆಯನ್ನ ಜನರು ಸಹಿಸಲ್ಲ: ರಂಭಾಪುರಿ ಶ್ರೀ

ABOUT THE AUTHOR

...view details