ತೂತುಕುಡಿ, ತಮಿಳುನಾಡು: ಮದುವೆಯಾದ ಕೆಲವೇ ಕ್ಷಣಗಳಲ್ಲಿ ವಧು ತನ್ನ ಪರಾಕ್ರಮ ತೋರಿದ್ದಾಳೆ. ಮದುವೆಯ ಸೀರೆಯಲ್ಲೇ ಗ್ರಾಮಸ್ಥರ ಮುಂದೆ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ.
ಈ ಅಪರೂಪದ ಪ್ರಸಂಗ ನಡೆದಿರುವುದು, ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಕೋಲು ಎಂಬ ಪ್ರದೇಶದಲ್ಲಿ. ಇಲ್ಲಿನ ಜೂನ್ 28ರಂದು ನಿಶಾ ಎಂಬಾಕೆಯ ವಿವಾಹ ನಡೆದಿತ್ತು. ಮದುವೆಯಾದ ಕೆಲವೇ ಕ್ಷಣಗಳಲ್ಲಿ ಮದುವೆ ನಡೆದ ಕಟ್ಟಡದ ಹೊರಗಿರುವ ಕಾಂಕ್ರಿಟ್ ರಸ್ತೆಗೆ ಬಂದ ನಿಶಾ ಮಾರ್ಷಲ್ ಆರ್ಟ್ಸ್ ಅನ್ನು ಪ್ರದರ್ಶಿಸಿದ್ದಾಳೆ.
ಮಾರ್ಷಲ್ ಆರ್ಟ್ಸ್ ಪ್ರದರ್ಶನ ತಮಿಳುನಾಡು ಅಥವಾ ದಕ್ಷಿಣ ಭಾರತದಲ್ಲಿ 'ಸಿಲಂಬಟ್ಟಂ ಅಡಿಮುರೈ' ಎಂದೇ ಹೆಸರಾದ ಮಾರ್ಷಲ್ ಆರ್ಟ್ಸ್ನ ಮಾದರಿಯನ್ನು ಪ್ರದರ್ಶಿಸಿದ್ದಾರೆ. ಹಲವಾರು ರೀತಿಯ ಸಾಮಗ್ರಿಗಳನ್ನು ಹಿಡಿದು ಮಾರ್ಷಲ್ ಆರ್ಟ್ ಪ್ರದರ್ಶನ ಮಾಡಿರುವುದು ಮೈಜುಮ್ಮೆನ್ನುವಂತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಶಾ ತಾನು ಮಹಿಳೆಯರಲ್ಲಿ ಸ್ವರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಷಲ್ ಆರ್ಟ್ ಪ್ರದರ್ಶಿಸಿದ್ದೇನೆ ಎಂದಿದ್ದಾಳೆ. ಸುಮಾರು ಮೂರು ವರ್ಷಗಳಿಂದ ಮಾರ್ಷಲ್ ಆರ್ಟ್ ಕಲಿಯುತ್ತಿದ್ದು, ಇನ್ನೂ ಹೆಚ್ಚು ಕಲಿಬೇಕೆಂದು ಎಂದಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ಉದ್ದೇಶಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ