ಕರ್ನಾಟಕ

karnataka

ETV Bharat / bharat

ಪ್ರತಿ ಆನ್​​ಲೈನ್​ ಕ್ಲಾಸ್​​ ರೆಕಾರ್ಡ್​ ಆಗಲಿ.. ತಮಿಳುನಾಡು ಸಿಎಂ ಮಹತ್ವದ ಆದೇಶ - ತಮಿಳುನಾಡು ಆನ್​ಲೈನ್ ಕ್ಲಾಸ್​

ಆನ್​ಲೈನ್​ ಕ್ಲಾಸ್​​ ನಡೆಯುತ್ತಿರುವ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Tamil Nadu CM Stalin
Tamil Nadu CM Stalin

By

Published : May 26, 2021, 10:38 PM IST

ಚೆನ್ನೈ(ತಮಿಳುನಾಡು):ವಿದ್ಯಾರ್ಥಿಗಳಿಗೆ ನಡೆಯುವ ಪ್ರತಿಯೊಂದು ಆನ್​ಲೈನ್​ ಕ್ಲಾಸ್​​ ರೆಕಾರ್ಡಿಂಗ್​ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್​ ಮಹತ್ವದ ಆದೇಶ ಹೊರಡಿಸಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ, ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​ ನಡೆಯುತ್ತಿವೆ. ಈ ವೇಳೆ, ಕೆಲವೊಂದು ಲೈಂಗಿಕ ಕಿರುಕುಳದಂತಹ ಆರೋಪ ಕೇಳಿ ಬರುತ್ತಿರುವ ಕಾರಣ ಸ್ಟಾಲಿನ್​ ಈ ನಿರ್ಧಾರ ಕೈಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಶಿಕ್ಷಕನೊಬ್ಬ ಟವೆಲ್​ ಧರಿಸಿ, ಅರೆಬೆತ್ತಲಾಗಿ ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದರು. ಈ ವೇಳೆ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣನ ವಿರುದ್ಧ ದೂರುಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಆನ್​ಲೈನ್​ ಕ್ಲಾಸ್​ ವೇಳೆ ಯಾವುದಾದರೂ ತೊಂದರೆ ಅಥವಾ ದೂರು ದಾಖಲಾದರೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಕರಣ ಗಂಭೀರವಾಗಿದ್ದರೆ ಪೊಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ABOUT THE AUTHOR

...view details