ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ರಜನಿಕಾಂತ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ರಜನಿಕಾಂತ್ ಆರೋಗ್ಯ ವಿಚಾರಿಸಿದ ತಮಿಳುನಾಡು ಸಿಎಂ - ರಜನಿಕಾಂತ್
ಅಕ್ಟೋಬರ್ 28ರಂದು ಚೆನ್ನೈನ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ರಜನಿಕಾಂತ್ ಅಡ್ಮಿಟ್ ಆಗಿದ್ದಾರೆ. ಅವರು ದಾಖಲಾಗಿರುವ ಆಸ್ಪತ್ರೆಗೆ ಸಿಎಂ ಸ್ಟಾಲಿನ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ..
ರಜನಿಕಾಂತ್ ಆರೋಗ್ಯ ವಿಚಾರಿಸಿದ ತಮಿಳುನಾಡು ಸಿಎಂ
ನಟ ರಜನಿಕಾಂತ್ ಅವರನ್ನು ಅಕ್ಟೋಬರ್ 28ರಂದು ಚೆನ್ನೈನ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ವರದಿ ಮಾಡಿದಂತೆ ರಜನಿಕಾಂತ್ ಅವರು ಒಂದೆರಡು ದಿನಗಳ ಹಿಂದೆ ಶೀರ್ಷಧಮನಿ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.