ಕರ್ನಾಟಕ

karnataka

ETV Bharat / bharat

ಐಎಎಸ್ ನಿಯಮಗಳನ್ನು ತಿರುಚುವ ಪ್ರಸ್ತಾಪ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್.. - ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್

ಪ್ರಧಾನವಾಗಿ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ತಪ್ಪು ಕೇಡರ್ ನಿರ್ವಹಣಾ ನೀತಿಗಳಿಂದಾಗಿ ಅನೇಕ ರಾಜ್ಯ ಸರ್ಕಾರಗಳು ನಿರ್ದಿಷ್ಟ ಹಿರಿತನದಲ್ಲಿ ಅಧಿಕಾರಿಗಳ ಕೊರತೆಯನ್ನು ಹೊಂದಿವೆ ಎಂಬ ಅಂಶವನ್ನು ನಾನು ಎತ್ತಿ ತೋರಿಸಲು ಬಯಸುತ್ತೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ..

tamil-nadu-cm-mk-stalin-wrote-letter-to-prime-minister-narendra-modi
ಪ್ರಧಾನಿ ಮೋದಿ ಹಾಗೂ ಎಂ ಕೆ ಸ್ಟಾಲಿನ್

By

Published : Jan 24, 2022, 6:21 PM IST

ಚೆನ್ನೈ :ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಐಎಎಸ್ ಕೇಡರ್ ನಿಯಮಗಳಿಗೆ ಸೂಚಿಸಿರುವ ತಿದ್ದುಪಡಿಯಿಂದಾಗಿ ರಾಷ್ಟ್ರದ ಫೆಡರಲ್ ರಾಜಕೀಯ ಮತ್ತು ರಾಜ್ಯ ಸ್ವಾಯತ್ತತೆಗೆ ದಕ್ಕೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್

ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕರಡು ತಿದ್ದುಪಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ನಿಯಮಗಳಿಂದ ನಮ್ಮ ರಾಷ್ಟ್ರದ ಫೆಡರಲ್ ಹಾಗೂ ರಾಜ್ಯದ ಸ್ವಾಯತ್ತತೆಗೆ ತೊಂದರೆಯಾಗಲಿದೆ ಎಂದಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಗಳನ್ನು ಜಾರಿಗೆ ತಂದರೆ, ಒಕ್ಕೂಟ ಮತ್ತು ರಾಜ್ಯಗಳ ನಡುವೆ ಇರುವ ಸಹಕಾರದ ಮನೋಭಾವಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತದೆ ಮತ್ತು ಕೇಂದ್ರ ಸರ್ಕಾರದಲ್ಲಿ ಅಧಿಕಾರಗಳ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನವಾಗಿ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ತಪ್ಪು ಕೇಡರ್ ನಿರ್ವಹಣಾ ನೀತಿಗಳಿಂದಾಗಿ ಅನೇಕ ರಾಜ್ಯ ಸರ್ಕಾರಗಳು ನಿರ್ದಿಷ್ಟ ಹಿರಿತನದಲ್ಲಿ ಅಧಿಕಾರಿಗಳ ಕೊರತೆಯನ್ನು ಹೊಂದಿವೆ ಎಂಬ ಅಂಶವನ್ನು ನಾನು ಎತ್ತಿ ತೋರಿಸಲು ಬಯಸುತ್ತೇನೆ ಎಂದರು.

ರಾಜ್ಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳು ಮುಂಚೂಣಿಯಲ್ಲಿವೆ. ರಾಜ್ಯಗಳು ಆಗಾಗ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿವೆ. ಇದು ಇತರೆಡೆಗಳಿಗಿಂತ ಹೆಚ್ಚಾಗಿ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಸೇವೆಯನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರದ ಸೇವೆಗಳು ಒಕ್ಕೂಟದಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುತ್ತಿರುವಾಗ, ಅಖಿಲ ಭಾರತ ಸೇವೆಗಳ ಕಲ್ಪನೆಯು ರಾಷ್ಟ್ರಕ್ಕೆ ಉತ್ತಮ ಸೇವೆ ಸಲ್ಲಿಸಿದೆ ಮತ್ತು ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಸೌಹಾರ್ದಯುತ ಕೆಲಸದ ಸಂಬಂಧದ ಮೂಲಕ ಸಮಯದ ಪರೀಕ್ಷೆಯನ್ನು ಹೊಂದಿದೆ ಎಂದಿದ್ದಾರೆ.

ಓದಿ:ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಸಿಎಂ ಬೊಮ್ಮಾಯಿ ಆದೇಶ

For All Latest Updates

TAGGED:

ABOUT THE AUTHOR

...view details