ಚೆನ್ನೈ (ತಮಿಳುನಾಡು):ಇಂದು ಮುಂಜಾನೆ ವಾಕಿಂಗ್ಗೆ ಬಂದವರಿಗೆ ಅಚ್ಚರಿಯೊಂದು ಕಾದಿತ್ತು. ಇವರೆಲ್ಲ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (68) ಅವರು ಸೈಕಲ್ ಸವಾರಿ ಮಾಡುವುದನ್ನು ಕಂಡು ಬೆರಗಾಗಿದ್ದಾರೆ.
ಮೊದಲಿನಿಂದಲೂ ವಾರಾಂತ್ಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸ್ಟಾಲಿನ್, ಸಿಎಂ ಆದ ಮೇಲೂ ತಮ್ಮ ಫಿಟ್ನೆಸ್ ದಿನಚರಿಯನ್ನ ಮುಂದುವರೆಸಿದ್ದಾರೆ. ವಾರಾಂತ್ಯದಲ್ಲಿ ಆಗಾಗ್ಗ ಕಿಲೋ ಮೀಟರ್ಗಟ್ಟಲೆ ಸೈಕಲ್ ಸವಾರಿ ಮಾಡುತ್ತಿರುತ್ತಾರೆ. ಬಿಡುವಿನ ವೇಳೆಯಲ್ಲಿ ಜಿಮ್ ಸಹ ಮಾಡುತ್ತಿರುತ್ತಾರೆ.