ಕರ್ನಾಟಕ

karnataka

ETV Bharat / bharat

ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರದ ಅನುಮತಿ - ನಿಬಂಧನೆಗಳೊಂದಿಗೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರ ಅನುಮತಿ

ಕೊರೊನಾ ಆರ್ಭಟದ ನಡುವೆಯೂ ತಮಿಳುನಾಡು ಸರ್ಕಾರ ಕೆಲವು ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆಯನ್ನು ನಡೆಸಲು ಅನುಮತಿಸಿದೆ.

Tamil Nadu allows bull-taming sport next year with certain restrictions
ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರ ಅಸ್ತು

By

Published : Dec 23, 2020, 12:14 PM IST

ಚೆನ್ನೈ(ತಮಿಳುನಾಡು): ಕೆಲವು ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆಯನ್ನು ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.

ಕ್ರೀಡೆಯ ವೇಳೆ 150 ಕ್ಕಿಂತ ಹೆಚ್ಚು ಆಟಗಾರರರು ಸೇರಬಾರದು. ಆಟಗಾರರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ. ಕೊರೊನಾ ನೆಗೆಟಿವ್‌ ವರದಿ ಬಂದರೆ ಮಾತ್ರ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಜನವರಿ ಮತ್ತು ಮೇ ತಿಂಗಳ ನಡುವೆ ನಡೆಸಲಾಗುತ್ತದೆ. ಜಲ್ಲಿಕಟ್ಟು ವೀಕ್ಷಕರಿಗೂ ಸಹ ನಿರ್ಬಂಧವಿದೆ. ಕ್ರೀಡಾಂಗಣದ ಆಸನಗಳ ಪೈಕಿ ಶೇ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಸಿಗಲಿದೆ.

ಓದಿ: ದೇಶದೊಳಗೆ ಅಕ್ರಮವಾಗಿ ನುಸುಳಲು ಯತ್ನ: 13 ರೊಹಿಂಗ್ಯಾ ಜನರ ಬಂಧನ

ಕ್ರೀಡೆಯ ವೇಳೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಲಿದೆ.

For All Latest Updates

TAGGED:

ABOUT THE AUTHOR

...view details