ಚೆನ್ನೈ: ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ಛಾಯಗ್ರಾಹಕ ಕೆ.ವಿ.ಆನಂದ್ ಅವರ ಅಂತ್ಯಕ್ರಿಯೆಯನ್ನು ಬೇಸಂತ್ ನಗರದಲ್ಲಿ ನೆರವೇರಿಸಲಾಯ್ತು.
ಹೃದಯಾಘಾತದಿಂದ ಮೃತಪಟ್ಟ ನಿರ್ದೇಶಕ ಕೆ ವಿ ಆನಂದ್ ಅಂತ್ಯಕ್ರಿಯೆ - KV Anand cremated at Besant Nagar Electric Cemetery.
ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ ವಿ ಆನಂದ್ ಅವರ ಅಂತ್ಯಕ್ರಿಯೆ ಬೇಸಂತ್ ನಗರದಲ್ಲಿ ಪಾಲಿಕೆ ಅಧಿಕಾರಿಗಳು ಕೋವಿಡ್ ನಿಯಮಾವಳಿ ಅನುಸಾರ ನೆರವೇರಿಸಿದ್ದಾರೆ.
![ಹೃದಯಾಘಾತದಿಂದ ಮೃತಪಟ್ಟ ನಿರ್ದೇಶಕ ಕೆ ವಿ ಆನಂದ್ ಅಂತ್ಯಕ್ರಿಯೆ anand](https://etvbharatimages.akamaized.net/etvbharat/prod-images/768-512-03:09:35:1619775575-768-512-11589120-764-11589120-1619767219754-3004newsroom-1619770002-1057.jpg)
54 ವರ್ಷ ವಯಸ್ಸಿನ ಆನಂದ್ ಚೆನ್ನೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಮೃತ ಆನಂದ್ಗೆ ಕೊರೊನಾ ಸೋಂಕು ತಗುಲಿದ್ದ ಕಾರಣ, ವೈದ್ಯರು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆ ಕೋವಿಡ್ ನಿಯಮಾವಳಿ ಪ್ರಕಾರ ಆನಂದ್ ಶವ ಸಂಸ್ಕಾರನ್ನು ನೆರವೇರಿಸಲಾಯ್ತು ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
1994 ರ ಮಲಯಾಳಂ ಚಿತ್ರ ಥೆನ್ಮವಿನ್ ಕೊಂಬತ್ ಚಿತ್ರದೊಂದಿಗೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಆನಂದ್ 2005ರಲ್ಲಿ ತಮಿಳಿನ ಕಾನಾ ಕಾಂಡೇನ್ ಚಿತ್ರದ ಮೂಲಕ ನಿರ್ದೇಶನಕನಾಗಿ ಹೊರಹೊಮ್ಮಿದ್ದರು. ಜೊತೆಗೆ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.