ಕರ್ನಾಟಕ

karnataka

ETV Bharat / bharat

ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ - ಪಿಚೈ ಅವರ ಚೆನ್ನೈನಲ್ಲಿರುವ ಪೂರ್ವಿಕರ ಮನೆ

ಗೂಗಲ್ ಸಿಇಒ ಸುಂದರ್ ಪಿಚೈ ಅವರ ಚೆನ್ನೈನಲ್ಲಿನ ಪೂರ್ವಿಕರ ಮನೆಯನ್ನು ಮಾರಾಟ ಮಾಡಲಾಗಿದೆ. ಸುಂದರ್ ಅವರ ತಂದೆ ಮನೆಯನ್ನು ಸಿ ಮಣಿಕಂದನ್ ಹೆಸರಿನ ತಮಿಳು ಚಿತ್ರನಟರೊಬ್ಬರಿಗೆ ಮಾರಾಟ ಮಾಡಿದ್ದಾರೆ.

Tamil actor buys Sundar Pichai's ancestral house in Chennai
Tamil actor buys Sundar Pichai's ancestral house in Chennai

By

Published : May 19, 2023, 5:56 PM IST

ಚೆನ್ನೈ (ತಮಿಳುನಾಡು): ಗೂಗಲ್ ಸಿಇಒ ಸುಂದರ್ ಪಿಚೈ ಅವರ ಚೆನ್ನೈನಲ್ಲಿರುವ ಪೂರ್ವಿಕರ ಮನೆಯನ್ನು ತಮಿಳು ಚಿತ್ರನಟರೊಬ್ಬರು ಖರೀದಿಸಿದ್ದಾರೆ. ಎಷ್ಟು ಮೊತ್ತಕ್ಕೆ ಖರೀದಿ ವಹಿವಾಟು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಲ ಚಿತ್ರಗಳಲ್ಲಿ ನಟಿಸಿರುವ ಸಣ್ಣ ಪ್ರಮಾಣದ ನಟರಾಗಿರುವ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಿ. ಮಣಿಕಂದನ್ ಈ ಮನೆಯನ್ನು ಖರೀದಿಸಿದ್ದಾರೆ. ಅಶೋಕ ನಗರ ಪ್ರದೇಶದಲ್ಲಿರುವ ಇದೇ ಮನೆಯಲ್ಲಿ ಸುಂದರ್ ಪಿಚೈ ಹುಟ್ಟಿ ದೊಡ್ಡವರಾಗಿದ್ದಾರೆ.

ಮಣಿಕಂದನ್ ಬಗ್ಗೆ ಹೇಳುವುದಾದರೆ, ಇವರು ಚೆನ್ನೈನ ಹಲವಾರು ಪ್ರದೇಶಗಳಲ್ಲಿ ತಮ್ಮ ಕಂಪನಿ ಬ್ರ್ಯಾಂಡ್ ಚೆಲ್ಲಪ್ಪಾಸ್ ಹೆಸರಿನಲ್ಲಿ 300 ಮನೆಗಳನ್ನು ಕಟ್ಟಿ ಜನರಿಗೆ ಮಾರಿದ್ದಾರೆ. ಸುಂದರ್ ಪಿಚೈ ಅವರ ತಂದೆ ಆರ್.ಎಸ್. ಪಿಚೈ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಾಗವನ್ನು ಸಮತಟ್ಟುಗೊಳಿಸಿ ಪ್ಲಾಟ್ ನೀಡಿದ್ದಾರೆ. ಅಲ್ಲದೇ ಜಾಗದ ದಾಖಲಾತಿಗಳನ್ನು ಹಸ್ತಾಂತರಿಸುವಾಗ ಅವರು ತುಂಬಾ ಭಾವುಕರಾಗಿದ್ದರು ಎಂದು ಮಣಿಕಂದನ್ ತಿಳಿಸಿದ್ದಾರೆ.

ಸುಂದರ್ ಪಿಚೈ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಅವರು 20 ವರ್ಷದವರೆಗೂ ಈ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಅವರು 1989 ರಲ್ಲಿ ಐಐಟಿ ಖರಗ್‌ಪುರದಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ಕಲಿಯಲು ನಗರವನ್ನು ತೊರೆದರು. ಆಸ್ತಿ ಮಾರಾಟಕ್ಕಿದೆ ಎಂದು ತಿಳಿದಾಗ, ಮಣಿಕಂದನ್ ಅವರು ತಕ್ಷಣ ಅದನ್ನು ಖರೀದಿಸಲು ನಿರ್ಧರಿಸಿದರು. ಸುಂದರ್ ಪಿಚೈ ಅವರ ತಂದೆ ಆರ್.ಎಸ್. ಪಿಚೈ ಅಮೆರಿಕದಿಂದ ವಾಪಸಾದ ನಂತರ ಮಣಿಕಂದನ್ ವ್ಯವಹಾರ ಪೂರ್ಣಗೊಳಿಸಿದರು.

ಸುಂದರ್ ಅವರ ಪೋಷಕರ ವಿನಮ್ರ ಗುಣಗಳ ಬಗ್ಗೆ ಮಣಿಕಂದನ್ ಮಾತನಾಡಿದ್ದಾರೆ. ಸುಂದರ್ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ತಯಾರಿಸಿದರು ಮತ್ತು ಅವರ ತಂದೆ ಮೊದಲ ಸಭೆಯಲ್ಲಿಯೇ ಜಾಗದ ದಾಖಲೆಗಳನ್ನು ನೀಡಿದರು ಎಂದು ಅವರು ಹೇಳಿದ್ದಾರೆ. ಆಸ್ತಿಯ ಮಾಲೀಕತ್ವ ಮತ್ತು ನೋಂದಣಿಯನ್ನು ತ್ವರಿತವಾಗಿ ಮಾಡಲು ತನ್ನ ಮಗನ ಹೆಸರನ್ನು ಬಳಸಬಾರದು ಎಂದು ಸುಂದರ್ ಪಿಚೈ ಅವರ ತಂದೆ ಒತ್ತಾಯಿಸಿದರು. ಆರ್.ಎಸ್. ಪಿಚೈ ನೋಂದಣಿ ಕಚೇರಿಯಲ್ಲಿ ಗಂಟೆಗಟ್ಟಲೆ ಕಾದು, ದಾಖಲೆಗಳನ್ನು ಅವರಿಗೆ ನೀಡುವ ಮೊದಲು ಎಲ್ಲ ಅಗತ್ಯ ತೆರಿಗೆಗಳನ್ನು ಪಾವತಿಸಿದರು ಎಂದು ಮಣಿಕಂದನ್ ತಿಳಿಸಿದರು.

ಸುಂದರ್ ಪಿಚೈ ಪ್ರಸ್ತುತ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಆಗಿದ್ದಾರೆ. ಯಶಸ್ವಿ ಆವಿಷ್ಕಾರಕ ಎಂದು ಕರೆಯಲ್ಪಡುವ ಅವರು ಗೂಗಲ್​ನಲ್ಲಿ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದ್ದಾರೆ. ಸುಂದರ್ ಪಿಚೈ ಅವರು ಜೂನ್ 10, 1972 ರಂದು ಭಾರತದಲ್ಲಿ ಜನಿಸಿದರು ಮತ್ತು ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಮುಗಿಸಿದ್ದರು . ಡಿಸೆಂಬರ್ 2019 ರಲ್ಲಿ, ಸುಂದರ್ ಪಿಚೈ ಅವರು ಲ್ಯಾರಿ ಪೇಜ್ ಬದಲಿಗೆ ಗೂಗಲ್ ಮತ್ತು ಆಲ್ಫಾಬೆಟ್ ಎರಡರ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನೂ ಓದಿ : 'ನಿಯಂತ್ರಕ ವೈಫಲ್ಯ ಆಗಿಲ್ಲ' ಅದಾನಿ-ಹಿಂಡೆನ್​ಬರ್ಗ್ ವಿವಾದದ ಬಗ್ಗೆ ಸಮಿತಿ ವರದಿ

ABOUT THE AUTHOR

...view details