ನವದೆಹಲಿ :ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದನ್ನು ಶೀಘ್ರದಲ್ಲೇ ಭಾರತದಲ್ಲಿ ಕಾನೂನುಬದ್ಧಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕಾರು ಚಾಲನೆ ಮಾಡುವಾಗ ಹ್ಯಾಂಡ್ ಫ್ರೀ ಡಿವೈಸ್ ಅಂದ್ರೆ ಬ್ಲೂಟೂತ್, ಇಯರ್‌ಫೋನ್ ಉಪಯೋಗಿಸಿ ಫೋನ್‍ನಲ್ಲಿ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಆದರೆ, ಆಗ ಚಾಲಕ ಫೋನನ್ನು ಕಾರಿನಲ್ಲಿಡದೆ ಜೇಬಲ್ಲಿ ಇಟ್ಟುಕೊಂಡಿರಬೇಕು.
ಇದಕ್ಕೆ ಪೊಲೀಸರು ದಂಡ ವಿಧಿಸಬಾರದು. ಒಂದು ವೇಳೆ ಯಾರಾದ್ರೂ ದಂಡ ವಿಧಿಸಿದ್ರೆ ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಫೋನ್‌ನಲ್ಲಿ ಮಾತನಾಡುತ್ತಲೇ ಚಾಲನೆ ಮಾಡಬಹುದು ಎಂದ ಮಾತ್ರಕ್ಕೆ ಮೊಬೈಲ್ ಅನ್ನು ನೇರವಾಗಿ ಕಿವಿಗೆ ಇಟ್ಟುಕೊಂಡು ಸಾಗುವುದಕ್ಕೆ ಯಾವತ್ತಿಗೂ ಕೂಡ ಅನುಮತಿ ನೀಡಲ್ಲ.