ಕರ್ನಾಟಕ

karnataka

ETV Bharat / bharat

ಅಮರುಲ್ಲಾ ಸಲೇಹ್ ಸೋದರನಿಗೆ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ ತಾಲಿಬಾನ್ - ಅಹ್ಮದ್ ಮಸೂದ್

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಸಲೇಹ್, ಅಹ್ಮದ್ ಮಸೂದ್ ಜೊತೆಗೆ ರಾಷ್ಟ್ರೀಯ ಪ್ರತಿರೋಧದ ಮುಂದಾಳುಗಳಲ್ಲಿ ಇವರೂ ಒಬ್ಬರು. ಪಂಜಶೀರ್ ಕಣಿವೆಯ ಮೇಲೆ ತಾಲಿಬಾನ್ ದಾಳಿಯ ನಂತರ ಈ ಹತ್ಯೆಯ ವರದಿಯಾಗಿದೆ.

ಅಮರುಲ್ಲಾ ಸಲೇಹ್ ಸೋದರನಿಗೆ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ ತಾಲಿಬಾನ್
ಅಮರುಲ್ಲಾ ಸಲೇಹ್ ಸೋದರನಿಗೆ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ ತಾಲಿಬಾನ್

By

Published : Sep 11, 2021, 2:24 AM IST

Updated : Sep 11, 2021, 5:58 AM IST

ನವದೆಹಲಿ: ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಸಹೋದರ ರೋಹುಲ್ಲಾ ಅಜೀಜಿಯನ್ನು ತಾಲಿಬಾನ್ ಕ್ರೂರವಾಗಿ ಹಿಂಸಿಸಿ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಸಲೇಹ್, ಅಹ್ಮದ್ ಮಸೂದ್ ಜೊತೆಗೆ ರಾಷ್ಟ್ರೀಯ ಪ್ರತಿರೋಧದ ಮುಂದಾಳುಗಳಲ್ಲಿ ಇವರೂ ಒಬ್ಬರು. ಪಂಜಶೀರ್ ಕಣಿವೆಯ ಮೇಲೆ ತಾಲಿಬಾನ್ ದಾಳಿಯ ಹಿನ್ನೆಲೆ ಈ ಹತ್ಯೆಯ ವರದಿಯಾಗಿದೆ.

ರೋಹುಲ್ಲಾ ಅಜೀಜಿಯವರ ಕುಟುಂಬ ಸದಸ್ಯರು ಈ ಸಂಬಂಧ ಪ್ರತಿಕ್ರಿಯಿಸಿ, ತಾಲಿಬಾನ್ ಇಸ್ಲಾಂ ಧರ್ಮದ ಅನುಸಾರವಾಗಿ ಅಂತ್ಯಕ್ರಿಯೆ ಮಾಡಲೂ ಬಿಡುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದರ ನಡುವೆ ಅಮರುಲ್ಲಾ ಸಲೇಹ್ ಮತ್ತು ಅಹ್ಮದ್ ಮಸೂದ್ ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಎನ್ ಆರ್ ಎಫ್ ತಾಲಿಬಾನ್ ವಿರುದ್ಧದ ಹೋರಾಟವನ್ನು ಮುಂದುವರಿಸುವ ಭರವಸೆ ನೀಡಿದೆ.

Last Updated : Sep 11, 2021, 5:58 AM IST

ABOUT THE AUTHOR

...view details