ಹೈದರಾಬಾದ್: ಪಂಜಶೀರ್ ಕಣಿವೆಯ ಮೇಲೆ ದಾಳಿ ನಡೆಸಲು ತಾಲಿಬಾನ್ ಸಜ್ಜಾಗಿದೆ. ಇನ್ನು, ಪಂಜಶೀರ್‌ನಲ್ಲಿನ ತಾಲಿಬಾನ್ ವಿರೋಧಿ ಮೈತ್ರಿಕೂಟವು ಶರಣಾಗಲು ನಾಲ್ಕು ಗಂಟೆಗಳ ಗಡುವನ್ನು ನೀಡಿದೆ, ವಿಫಲವಾದರೆ ಕ್ರೂರ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಭಾರತದ ಅಫ್ಘಾನ್ ರಾಜಕೀಯ ಮತ್ತು ನಾಗರಿಕ ಕಾರ್ಯಕರ್ತ ನಿಸಾರ್ ಅಹ್ಮದ್ ಶೆರ್ಜೈ ಮಾಹಿತಿ ನೀಡಿದ್ದಾರೆ. ತಾಲಿಬಾನ್ ವಿರುದ್ಧ ಹೋರಾಡಲು ಅಲ್ಲಿನ ತಾಲಿಬಾನ್ ವಿರೋಧಿ ಒಕ್ಕೂಟದ ಸದಸ್ಯರು ಮತ್ತು ಇತರ ತಾಲಿಬಾನ್ ವಿರೋಧಿ ನಾಯಕರು ಒಟ್ಟುಗೂಡುತ್ತಿದ್ದಾರೆ.
ತಾಲಿಬಾನ್ ಇದರಲ್ಲಿ ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಪಂಜಶೀರ್ ಕಷ್ಟಕರವಾದ ಭೂಗೋಳ ಮತ್ತು ಅದರ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಕೂಡ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ತಾಲಿಬಾನ್ ಈ ಹಿಂದೆಯೂ ಕೂಡ ಪಂಜಶೀರ್ ಮೇಲೆ 1990ರಲ್ಲಿ ದಾಳಿ ಮಾಡಲು ಮತ್ತು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ವಿಫಲರಾದರು. ಈ ಹಿನ್ನೆಲೆ ಈ ಬಾರಿ ಕೂಡ ಅವರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.