ಉತ್ತರ ಪ್ರದೇಶ: ತಾಜ್ಮಹಲ್ನ್ನು ಶೀಘ್ರದಲ್ಲೇ ರಾಮ ಮಹಲ್ ಅಥವಾ ಶಿವ ಮಹಲ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಬಲಿಯಾ ಜಿಲ್ಲೆಯ ಬೈರಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಮುಸ್ಲಿಂ ಆಡಳಿತಗಾರರು ಮತ್ತು ಆಕ್ರಮಣಕಾರರು ಭಾರತದ ಸಂಸ್ಕೃತಿಯನ್ನು ನಾಶಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಈಗ ಅದನ್ನು ಪುನಃ ಸ್ಥಾಪಿಸಲು ಸುವರ್ಣ ಯುಗ ಬಂದಿದೆ ಎಂದರು.