ಆಗ್ರಾ (ಉತ್ತರ ಪ್ರದೇಶ): ತಾಜ್ ಮಹಲ್ ಪ್ರವೇಶಕ್ಕೆ ಯುಪಿಐ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ತರುವಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಚಿಂತಿಸುತ್ತಿದ್ದು, ಸ್ಮಾರಕಗಳಲ್ಲಿನ ಟಿಕೆಟಿಂಗ್ ವ್ಯವಸ್ಥೆಯು ಸಂಪೂರ್ಣ ಡಿಜಿಟಲ್ ಆದ ನಂತರದಲ್ಲಿ ಆಫ್‌ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ಗಳನ್ನು ಸಂಪೂರ್ಣವಾಗಿ ಮುಚ್ಚಲು ಯೋಜಿಸುತ್ತಿದೆ.
ಟಿಕೆಟ್ ಕೌಂಟರ್ ಹೊರಗಡೆ ಏರ್ಪಡುವ ದೀರ್ಘ ಸರತಿ ಹಾಗೂ ಅವ್ಯವಸ್ಥೆ ತಡೆಯಲು ಎಎಸ್ಐ ಈ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಇಲಾಖೆ ಶೀಘ್ರದಲ್ಲೇ ವೆಬ್‌ಸೈಟ್‌ನೊಂದಿಗೆ ಅಪ್ಲಿಕೇಶನ್ ಅನ್ನು ಕೂಡ ಪ್ರಾರಂಭಿಸಲು ಚಿಂತಿಸುತ್ತಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ:ಆಗ್ರಾ ವಲಯದ ಸೂಪರಿಂಟೆಂಡೆಂಟ್ ಪುರಾತತ್ವಶಾಸ್ತ್ರಜ್ಞ ಡಾ.ರಾಜ್‌ಕುಮಾರ್ ಪಟೇಲ್ ಮಾತನಾಡಿ, ಜನಸಂದಣಿ ಹೆಚ್ಚುತ್ತಿರುವ ಕಾರಣ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಸರಳೀಕರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ತಾಜ್ ಮಹಲ್ ಟಿಕೆಟ್ ಕೌಂಟರ್ ತೆರೆದಾಗ, ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ ಪ್ರವಾಸಿಗರು ಸಹ ಆಫ್‌ಲೈನ್ ವಿಂಡೋಗಳಿಂದ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.