ಕರ್ನಾಟಕ

karnataka

ETV Bharat / bharat

ಮಹಿಳಾ ಕಾನ್​ಸ್ಟೇಬಲ್​​ಗಳ ಬಟ್ಟೆಗಾಗಿ ಅಳತೆ ತೆಗೆದುಕೊಂಡ ಟೈಲರ್​.. ವಿಡಿಯೋ ವೈರಲ್​​.. - Tyler who took measurement of woman body

ನೆಲ್ಲೂರು ಪಟ್ಟಣದ ಉಮೇಶ್ಚಂದ್ರ ಸಭಾಂಗಣದಲ್ಲಿ ಪುರುಷ ಟೈಲರ್‌ವೊಬ್ಬರು ಸೆಕ್ರೆಟರಿಯೇಟ್ ಮಹಿಳಾ ಕಾನ್‌ಸ್ಟೇ ಬಲ್‌ಗಳ ದೇಹದ ಅಳತೆ ತೆಗೆದುಕೊಂಡಿದ್ದಾರೆ. ದುಃಖಕರ ಎಂದರೆ ಮಹಿಳಾ ಪೊಲೀಸರು, ಯುನಿಫಾರ್ಮ್​​ಗಾಗಿ ಅಳತೆ ನೀಡಿದ್ದಾರೆ.

Male tailor taking women constable's body measurements goes viral
Male tailor taking women constable's body measurements goes viral

By

Published : Feb 7, 2022, 7:26 PM IST

Updated : Feb 8, 2022, 3:42 PM IST

ನೆಲ್ಲೂರು(ಆಂಧ್ರಪ್ರದೇಶ): ಇಲ್ಲಿನ ನೆಲ್ಲೂರು ಜಿಲ್ಲೆಯಲ್ಲಿ ಪುರುಷ ಟೈಲರ್‌ವೊಬ್ಬರು ಮಹಿಳಾ ಪೊಲೀಸರ ದೇಹದ ಅಳತೆ ತೆಗೆದ ಘಟನೆ ವೈರಲ್ ಆಗಿದೆ. ನೆಲ್ಲೂರು ಪಟ್ಟಣದ ಉಮೇಶ್ಚಂದ್ರ ಸಭಾಂಗಣದಲ್ಲಿ ಪುರುಷ ಟೈಲರ್‌ವೊಬ್ಬರು ಸೆಕ್ರೆಟರಿಯೇಟ್ ಮಹಿಳಾ ಕಾನ್‌ಸ್ಟೆಬಲ್‌ಗಳ ದೇಹದ ಅಳತೆ ತೆಗೆದುಕೊಂಡಿದ್ದಾರೆ. ದುಃಖಕರವೆಂದರೆ ಮಹಿಳಾ ಪೊಲೀಸರು ಅಳತೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ಯಾರಿಗೆ ದೂರು ನೀಡಬೇಕೆಂದು ಅವರಿಗೆ ತಿಳಿದಿಲ್ಲ. ಇವರೆಲ್ಲರೂ ಕವಲಿ ಮತ್ತು ಆತ್ಮಕೂರು ವಿಭಾಗದ ಕಾನ್‌ಸ್ಟೇಬಲ್​​ಗಳು ಎಂಬುದು ತಿಳಿದು ಬಂದಿದೆ.

ಅವರಿಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪುರುಷ ಹೆಂಗಸರ ಬಟ್ಟೆ ಅಳತೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ? ನಿಮ್ಮ ಮನೆಯಲ್ಲಿ ಮಹಿಳೆಯರನ್ನು ಈ ರೀತಿ ಮಾಡುತ್ತೀರಾ? ಎಂಬ ಪ್ರಶ್ನೆ ಈಗ ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.

ಮಹಿಳಾ ಕಾನ್​ಸ್ಟೇಬಲ್​​ಗಳ ಬಟ್ಟೆಗಾಗಿ ಅಳತೆ ತೆಗೆದುಕೊಂಡ ಟೈಲರ್​

ಘಟನೆ ಕುರಿತು ಎಸ್​ಪಿ ವಿಜಯರಾವ್ ಮಾತನಾಡಿದರು:ಘಟನೆ ಕುರಿತು ಜಿಲ್ಲಾ ಎಸ್​ಪಿ ವಿಜಯರಾವ್ ಪ್ರತಿಕ್ರಿಯಿಸಿದ್ದು, ಮಹಿಳಾ ಪೊಲೀಸರ ಸಮವಸ್ತ್ರದ ಜವಾಬ್ದಾರಿಯನ್ನು ಹೊರಗುತ್ತಿಗೆಗೆ ಒಪ್ಪಿಸಿದರು. ಮಹಿಳೆಯರು ಅಳತೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಸರಿಪಡಿಸಿದ್ದೇನೆ ಎಂದರು.

ಅಳತೆ ತೆಗೆದುಕೊಂಡವರಲ್ಲಿ ಮಹಿಳಾ ಟೈಲರ್‌ಗಳು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ವ್ಯಕ್ತಿಯೊಬ್ಬ ನಿಯಮಗಳಿಗೆ ವಿರುದ್ಧವಾಗಿ ಆವರಣ ಪ್ರವೇಶಿಸಿ ಫೋಟೋ ತೆಗೆದಿದ್ದಾನೆ. ಮಹಿಳೆಯರ ಖಾಸಗಿತನವನ್ನು ಉಲ್ಲಂಘಿಸುವ ಪುರುಷನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಘಟನೆ ಬಗ್ಗೆ ಹಲವು ರಾಜಕೀಯ ಮುಖಂಡರಿಂದ ಟೀಕೆ:ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ ಎಂಬುದಕ್ಕೆ ನೆಲ್ಲೂರು ಘಟನೆಯೇ ನಿದರ್ಶನ ಎಂದು ಟಿಡಿಪಿ ನಾಯಕಿ ವಂಗಲಪುಡಿ ಅನಿತಾ ಆರೋಪಿಸಿದ್ದಾರೆ.

ನಮ್ಮ ಮನೆ ಸಮೀಪದ ಟೈಲರಿಂಗ್ ಅಂಗಡಿಯಲ್ಲಿ ಹೆಣ್ಣು ಮಕ್ಕಳಿಗೆ ಬಟ್ಟೆ ಹೊಲಿಯುವ ಮುನ್ನ ಎರಡು ಬಾರಿ ಯೋಚಿಸುತ್ತೇವೆ. ಪೊಲೀಸ್ ಸಮವಸ್ತ್ರ ಎಂಬ ಒಂದೇ ಕಾರಣಕ್ಕೆ ಮಹಿಳಾ ಪೊಲೀಸರನ್ನು ಆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ.

ಮಹಿಳಾ ಗೃಹ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಡಿಜಿಪಿಗಳಿಗೆ ಸಾಮಾನ್ಯ ಜ್ಞಾನವಿದೆಯೇ? ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ರಕ್ಷಣೆ ಇಲ್ಲ ಎಂದಾದರೆ ರಾಜ್ಯದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಹೇಗೆ? ಸರ್ಕಾರವು ಮಹಿಳೆಯರನ್ನು ಹೇಗೆ ತಾರತಮ್ಯದಿಂದ ಸಮಾನವಾಗಿ ಪರಿಗಣಿಸುತ್ತದೆ? ಎಂದು ಟಿಡಿಪಿ ನಾಯಕಿ ವಂಗಲಪುಡಿ ಅನಿತಾ ಪ್ರಶ್ನಿಸಿದ್ದಾರೆ.

ಪೊಲೀಸರು ಅಶ್ಲೀಲತೆಗೆ ಉತ್ತೇಜನ ನೀಡುತ್ತಿದ್ದಾರೆಯೇ ಹೊರತು ನಾಗರಿಕ ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಹಿಳಾ ಪೊಲೀಸರ ಸಮವಸ್ತ್ರಕ್ಕೆ ಪುರುಷ ಟೈಲರ್ ಗಳನ್ನು ಬಳಸುತ್ತಿರುವುದನ್ನು ಮಹಿಳಾ ಸಂಘಟನೆಗಳು ಖಂಡಿಸಿವೆ. ಮಹಿಳಾ ಒಕ್ಕೂಟದ ನಾಯಕಿ ರೆಹಾನಾ ಬೇಗಂ ಮಾತನಾಡಿ, ಜವಾಬ್ದಾರಿಯುತ ಪೊಲೀಸರು ಹೀಗೆ ಮಾಡುವುದು ಸರಿಯಲ್ಲ. ಪುರುಷರೊಂದಿಗೆ ಅಳತೆ ತೆಗೆದುಕೊಳ್ಳಲು ಪೊಲೀಸರಿಗೆ ಹೇಗೆ ಅವಕಾಶ ನೀಡಲಾಯಿತು ಎಂದು ಮಹಿಳೆಯರು ಪ್ರಶ್ನಿಸಿದರು.

ಓದಿ:2 ಬಸ್​​ಗಳಲ್ಲಿ ಅಗ್ನಿ ಅವಘಡ: ಮಿಡಿ ಬಸ್​​ಗಳ ಕಾರ್ಯಾಚರಣೆ ನಿಲ್ಲಿಸಿದ ಬಿಎಂಟಿಸಿ

Last Updated : Feb 8, 2022, 3:42 PM IST

For All Latest Updates

TAGGED:

ABOUT THE AUTHOR

...view details