ಕಲ್ಲಕುರುಚಿ(ತಮಿಳುನಾಡು):ಯುವಕನೋರ್ವ ತೃತೀಯ ಲಿಂಗಿಯನ್ನು ವಿವಾಹವಾಗಿರುವ ಅಪರೂಪದ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಉಲ್ಲುತ್ತುಪೆಟ್ಟೈ ಎಂಬಲ್ಲಿ ಬುಧವಾರ ನಡೆಯಿತು.
29 ವರ್ಷದ ಚೆನ್ನೈ ಮೂಲದ ಯುವಕ ಮನೋ ಎಂಬಾತ 25 ವರ್ಷದ ತೃತೀಯ ಲಿಂಗಿ ಮಹಿಳೆಯಾದ ರಿಯಾಳನ್ನು ವಿವಾಹವಾಗಿದ್ದಾನೆ.

ಮನೋ ಮತ್ತು ರಿಯಾ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪೋಷಕರ ಒಪ್ಪಿಗೆಯಿಲ್ಲದೇ ನಡೆದ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಿದೆ.
ತಮಿಳುನಾಡಿನಲ್ಲಿ ಇಂಥ ಘಟನೆ ಇದೇ ಮೊದಲೇನಲ್ಲ. ಈ ಹಿಂದೆ ಕೊಯಮತ್ತೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಈ ರೀತಿಯ ವಿವಾಹಗಳು ಜರುಗಿವೆ. ಕೊಯಮತ್ತೂರಿನಲ್ಲಿ ನಡೆದ ಪ್ರಕರಣದಲ್ಲಿ ಮೊದಲಿಗೆ ವಿವಾಹ ನೋಂದಣಿ ಮಾಡಿಕೊಳ್ಳಲು ಅಧಿಕಾರಿ ನಿರಾಕರಿಸಿದ್ದು, ನಂತರ ಮದ್ರಾಸ್ ಹೈಕೋರ್ಟ್ ವಿವಾಹ ನೋಂದಣಿ ಮಾಡಿಕೊಳ್ಳಬೇಕೆಂದು ಆದೇಶ ನೀಡಿದೆ.
ಇದನ್ನೂ ಓದಿ:ವಿದ್ಯಾರ್ಥಿನಿ ಕೊಲೆ ಮಾಡಿ ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋದ ಕಿರಾತಕರು