ಕರ್ನಾಟಕ

karnataka

ETV Bharat / bharat

ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ವಿಧಿವಶ!

ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ಅವರು ವಯೋಸಹಜವಾಗಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

Sylvester daCunha passes away
ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ನಿಧನ

By

Published : Jun 22, 2023, 11:30 AM IST

ಅಮುಲ್ ಗರ್ಲ್ ಸೃಷ್ಠಿಕರ್ತ ಹಾಗೂ ಅಮುಲ್ ಜಾಹೀರಾತುಗಳಲ್ಲಿ ಸುಮಾರು 6 ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಸಿಲ್ವೆಸ್ಟರ್ ದಕುನ್ಹಾ ಅವರು ಮಂಗಳವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.

ಸಂತಾಪ ಸೂಚಿಸಿದ ಅಮುಲ್​ ಸಂಸ್ಥೆ : ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರು ಸಿಲ್ವೆಸ್ಟರ್ ದಕುನ್ಹಾ (Sylvester daCunha) ಅವರ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ದಕುನ್ಹಾ ಕಮ್ಯುನಿಕೇಷನ್ಸ್ ಅಧ್ಯಕ್ಷ ಸಿಲ್ವೆಸ್ಟರ್ ದಕುನ್ಹಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ತಿಳಿಸಲು ತುಂಬಾ ದುಃಖವಾಗಿದೆ. ಅಮುಲ್ ಸಂಸ್ಥೆಯು ಈ ನಿಧನದ ದುಃಖದಲ್ಲಿ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ಜನಪ್ರಿಯಳಾಗಿದ್ದ ಅಮುಲ್​ ಗರ್ಲ್ ​:ಅಮುಲ್ ಗರ್ಲ್ ಅನೇಕ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಹಾಸ್ಯಮಯವಾಗಿ ಜಾಹೀರಾತುಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಮುಲ್ ಗರ್ಲ್ ದೇಶದಾದ್ಯಂತ ಜನಪ್ರಿಯಳಾಗಿದ್ದರು. ಜಾಹೀರಾತು ಉದ್ಯಮದ ಅನುಭವಿ ಸಿಲ್ವೆಸ್ಟರ್ ದಕುನ್ಹಾ (Sylvester daCunha) ಅವರು 1960 ರ ದಶಕದಲ್ಲಿ 'ಅಮುಲ್ ಗರ್ಲ್' ಜಾಹೀರಾತು ಪ್ರಚಾರವನ್ನು ಪ್ರಾರಂಭಿಸಿದರು ಎಂದು ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದರು. ಸಿಲ್ವೆಸ್ಟರ್ ದಕುನ್ಹಾ ಅವರು 'ಅಟ್ಟರ್ಲಿ ಬಟರ್ಲಿ' ಪರಿಕಲ್ಪನೆಯನ್ನೂ ಪರಿಚಯಿಸಿದ್ದರು. 1966 ರಲ್ಲಿ, GCMMF ಒಡೆತನದ ಅಮುಲ್ ಬ್ರಾಂಡ್‌ನ ಜಾಹೀರಾತಿನ ಮೂಲಕ 'ಅಮುಲ್ ಗರ್ಲ್' ಅನ್ನು ಜಗತ್ತಿಗೆ ಪರಿಚಯಿಸಲಾಯಿತು.

ಸಿಲ್ವೆಸ್ಟರ್ ದಕುನ್ಹಾ ನಿಧನಕ್ಕೆ ಸಂತಾಪ: ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರ ಈ ಸಂತಾಪದ ಪೋಸ್ಟ್ ಅನ್ನು ನೋಡಿದ ಹಲವರು ಟ್ವಿಟರ್​ನಲ್ಲಿ ಸಿಲ್ವೆಸ್ಟರ್ ದಕುನ್ಹಾ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಇದನ್ನೂ ಓದಿ:ರಾಮಾಯಣ ಆಧಾರಿತ ಸಿನಿಮಾಗಿಲ್ಲ ಸ್ಪಂದನೆ: ಆದಿಪುರುಷ್​ ಗಳಿಕೆ ಇಳಿಕೆ!!

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿತಿಕ್ರಿಯಿಸಿ, "ನಿಜವಾಗಿಯೂ ಭಾರತೀಯ ಜಾಹೀರಾತು ಉದ್ಯಮದ ವರಿಷ್ಠರು, ಬ್ರಾಂಡ್ ಬಿಲ್ಡರ್, ವೈಯಕ್ತಿಕವಾಗಿ ನಮಗೆ ತಿಳಿದಿರುವ ಅಮುಲ್ ! ಅವರ ಅಪಾರ ಕೊಡುಗೆಗಳಿಗೆ ವಂದನೆಗಳು. ನಮ್ಮ ಪ್ರಾರ್ಥನೆಗಳು ಅವರೊಂದಿಗಿವೆ ಮತ್ತು ಅವರ ಪರಂಪರೆ ಮುಂದುವರೆಯಲಿ ಮತ್ತು ಬೆಳೆಯಲಿ ಓಂ ಶಾಂತಿ" ಎಂದು ಬರೆದಿದ್ದಾರೆ. ಮತ್ತೊಬ್ಬರು ಕಾಮೆಂಟ್​ ಮಾಡಿ, "ಸಿಲ್ವೆಸ್ಟರ್ ದಕುನ್ಹಾ ಅವರನ್ನು ಅಮುಲ್‌ಗೆ ಅವರ ಸೃಜನಶೀಲ ಮತ್ತು ಅಪಾರ ಕೊಡುಗೆಗಳಿಗಾಗಿ ಮುಂದಿನ ದಿನಗಳಲ್ಲಿ ನೆನಪಿಸಿಕೊಳ್ಳಲಾಗುತ್ತದೆ. ಕುಟುಂಬಕ್ಕೆ ನನ್ನ ಸಂತಾಪ!" ಎಂದು ಬರೆದಿದ್ದಾರೆ.

ಇದನ್ನೂ ಓದಿ:Haddi: ನವಾಜುದ್ದೀನ್ ಸಿದ್ದಿಕಿಯ ಸಿನಿಮಾದಲ್ಲಿ ನಟಿಸುತ್ತಿರುವ 300 ತೃತೀಯಲಿಂಗಿಗಳು

ABOUT THE AUTHOR

...view details