ಶ್ರೀನಗರ:ಸಕ್ರೀಯ ರಾಜಕಾರಣ ಹಾಗೂ ತೇಹ್ರಿಕ್ ಹುರಿಯತ್ ಪಕ್ಷದಿಂದ ಕಳೆದ ವರ್ಷ ನಿವೃತ್ತಿ ಪಡೆದುಕೊಂಡಿದ್ದ 92 ವರ್ಷದ ಸೈಯದ್ ಅಲಿ ಶಾ ಗಿಲಾನಿ ನಿಧನರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಮೆಹಮೂಬಾ ಮುಫ್ತಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಹುರಿಯತ್ ಮುಖಂಡರಾಗಿದ್ದ ಸೈಯದ್ ಅಲಿ ಶಾ ಗಿಲಾನಿ ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಜಮ್ಮು-ಕಾಶ್ಮೀರ ಪ್ರತ್ಯೇಕತಾ ಹೋರಾಟ ನಡೆಸಿದ್ದರು. ಸೆಪ್ಟೆಂಬರ್ 29, 1929ರಂದು ಜನಸಿದ ಗಿಲಾನಿ,ತಹ್ರೀಕ್-ಇ- ಹುರಿಯತ್ ಸಂಘಟನೆ ಹುಟ್ಟುಹಾಕಿದ್ದರು. ಸೊಪೋರ್ ಕ್ಷೇತ್ರದಿಂದ 1972,1977 ಹಾಗೂ 1987ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, 2020ರ ಜೂನ್ ತಿಂಗಳಲ್ಲಿ ಎಲ್ಲ ಪಕ್ಷಗಳ ಹುರಿಯತ್ ಕಾನ್ಪರೆನ್ಸ್ನ ಅಧ್ಯಕ್ಷರಾಗಿದ್ದರು.
ಮೆಹಬೂಬಾ ಮುಫ್ತಿ ಟ್ವೀಟ್
ಗಿಲಾನಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಹೆಚ್ಚಿನ ವಿಷಯಗಳಲ್ಲಿ ಅವರನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಆದರೆ ದೃಢತೆ ಮತ್ತು ನಂಬಿಕೆಗಳ ಮೇಲಿನ ನಿಲುವಿಗೆ ನಾನು ಅವರಿಗೆ ಗೌರವ ನೀಡುತ್ತೇನೆ. ಅವರ ಸಾವಿನ ದುಃಖವನ್ನ ಸಹಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ ಬಳಿಕ ಗಿಲಾನಿ ಹುರಿಯತ್ ಕಾನ್ಫರೆನ್ಸ್ ಸಂಘಟನೆ ಹುದ್ದಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿರಿ: ಕೋವಿಡ್ ನಿಯಮದೊಂದಿಗೆ ಗಣೇಶ ಹಬ್ಬ ಆಚರಣೆಗೆ ಸಿಎಂ ಅನುಮತಿ ನೀಡಬಹುದು: ಸಚಿವೆ ಜೊಲ್ಲೆ
ಭಾರತದಿಂದ ಜಮ್ಮು-ಕಾಶ್ಮೀರ ಪ್ರತ್ಯೇಕವನ್ನಾಗಿಸಬೇಕು ಎಂಬ ಹೋರಾಟ ನಡೆಸಿದ್ದ ಗಿಲಾನಿ, ಜಮ್ಮು-ಕಾಶ್ಮೀರ ಪ್ರತ್ಯೇಕವಾಗುವವರೆಗೂ ಇಲ್ಲಿನ ಜನರ ಜನಸು ಈಡೇರಿಕೆ ಅಸಾಧ್ಯ ಎಂಬ ಮಾತು ಸಹ ಅವರು ಹೇಳಿದ್ದರು. ಕಣಿವೆ ನಾಡಿನಲ್ಲಿ ಪಾಕ್ ಜೊತೆ ಸೇರಿ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿ ನೂರಾರು ಕೋಟಿ ರೂಪಾಯಿ ಆಸ್ತಿಗಳಿಕೆ ಮಾಡಿದ್ದಾರೆ ಎಂಬ ಆರೋಪ ಸಹ ಇವರ ಮೇಲಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಗಿಲಾನಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.