ರಾಂಚಿ(ಜಾರ್ಖಂಡ್):ಇತ್ತೀಚೆಗೆ ಬಂಧನಕ್ಕೊಳಗಾಗಿರುವ ನಕ್ಸಲರ ಫೋನ್ಗಳಲ್ಲಿ ಸ್ವಯಂಚಾಲಿತ ರೈಫಲ್ಸ್ ಮತ್ತು ಇತರೆ ಸುಧಾರಿತ ಶಸ್ತ್ರಾಸ್ತ್ರಗಳ ಚಿತ್ರಗಳು ದೊರೆತಿದ್ದು, ಅವರು ಪಾಕ್-ಚೀನಾ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ನಿಷೇಧಿತ ನಕ್ಸಲ್ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ(PLFI) ಶಸ್ತ್ರಾಸ್ತ್ರ ಪಡೆದುಕೊಳ್ಳಲು ಪಾಕ್-ಚೀನಾ ಸಹಾಯ ಪಡೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಪಿಎಲ್ಎಫ್ಐ ನಕ್ಸಲರನ್ನು ಬಂಧಿಸಲಾಗಿತ್ತು. ಈ ವೇಳೆ ಅವರ ಫೋನ್ಗಳಲ್ಲಿ ಅನೇಕ ಮಹತ್ವದ ಸುಳಿವು ದೊರೆತಿದ್ದು, ಅತ್ಯಂತ ಪ್ರಮುಖವಾಗಿ ಭಾರತದಲ್ಲಿ ಬಳಕೆ ಮಾಡದ ಸ್ವಿಸ್ ರೈಫಲ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳ ಚಿತ್ರ ಲಭ್ಯವಾಗಿದ್ದು, ಪಿಎಲ್ಎಫ್ಐ ಮುಖ್ಯಸ್ಥ ದಿನೇಶ್ ಗೋಪೆ ವಿದೇಶದಿಂದ ಇವುಗಳನ್ನು ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ನಡುರಸ್ತೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸಿಕ್ಕ ಬಾಲಕಿ ಸ್ಥಿತಿ ಚಿಂತಾಜನಕ: ಅತ್ಯಾಚಾರ ಶಂಕೆ
ಜನವರಿ 10ರಂದು ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಮೂವರು PLFI ನಕ್ಸಲರ ಬಂಧನ ಮಾಡಲಾಗಿತ್ತು. ಈ ವೇಳೆ, 12 ಲಕ್ಷ ರೂ. ಮತ್ತು 19 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.