ಹೈದರಾಬಾದ್: ಡಿನ್ನರ್ಗೆ ಬಿರಿಯಾನಿಯನ್ನು ಹೆಚ್ಚಾಗಿ ಇಷ್ಟಪಡುವ ನಗರವಾಸಿಗಳು 'ಬನ್ ಮಸ್ಕಾ'ದ ರುಚಿಯನ್ನು ಸ್ನ್ಯಾಕ್ ಆಗಿ ಸವಿಯಲು ಬಯಸುತ್ತಿದ್ದಾರೆ. ಈ ಸಾಲಿನ ಜನವರಿಯಿಂದ ನವೆಂಬರ್ 15ರ ವರೆಗೆ ಸ್ವೀಕರಿಸಿದ ಆರ್ಡರ್ಗಳ ಆಧಾರದ ಮೇರೆಗೆ ಆಹಾರ ಸೇವನೆಯ ಟ್ರೆಂಡ್ ವರದಿಯನ್ನು ಸ್ವಿಗ್ಗಿ ಮಂಗಳವಾರದಂದು ಬಿಡುಗಡೆ ಮಾಡಿದೆ.
- ಈ ವರ್ಷ ಓರ್ವ ವ್ಯಕ್ತಿಯ ಅತ್ಯಧಿಕ ಆರ್ಡರ್ - 1,633 ಬಿರಿಯಾನಿಗಳು.
- ಓರ್ವ ವ್ಯಕ್ತಿಯ ಸಿಂಗಲ್ ಆರ್ಡರ್ ಬಿಲ್ - 37,008 ರೂ.
- ಅವರು ಹೆಚ್ಚಾಗಿ ಚಿಕನ್ ಬಿರಿಯಾನಿ, ಮಸಾಲ ದೋಸೆ, ಬಟರ್ ನಾನ್, ಚಿಕನ್ 65 ಮತ್ತು ಇಡ್ಲಿಯನ್ನು ಸವಿದಿದ್ದಾರೆ.
- ಓರ್ವ ವ್ಯಕ್ತಿ ಒಂದು ವರ್ಷದಲ್ಲಿ 6 ಲಕ್ಷ ರೂ. ಮೌಲ್ಯದ ಇಡ್ಲಿಗಳನ್ನು ಆರ್ಡರ್ ಮಾಡಿದ್ದಾರೆ.
- ಆಹಾರ ಪ್ರೇಮಿಯೊಬ್ಬರು ಡೈನ್ಔಟ್ ಬಳಸಿ 1.78 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ (ಇದು ಬಿಲ್‌ಗಳ ಮೇಲಿನ ರಿಯಾಯಿತಿಗೆ ಪೂರಕವಾಗಿದೆ).
- ಶೇ. 88.23 ರಷ್ಟು ಜನರು ಡಿಜಿಟಲ್ ವೇದಿಕೆ ಮೂಲಕ ಬಿಲ್ ಪಾವತಿಸುತ್ತಿದ್ದಾರೆ.
- ಜನರು ಹೆಚ್ಚಾಗಿ ಚಿಕನ್ ಪಾಪ್‌ಕಾರ್ನ್, ಹಾಟ್ ಚಿಕನ್ ವಿಂಗ್ಸ್, ವೆಜ್ ಪಫ್, ಸಮೋಸಾ, ಬನ್ ಮಸ್ಕಾ, ಸಿಹಿತಿಂಡಿಗಳಾದ ಡಬಲ್ ಕಾ ಮೀಠಾ, ಏಪ್ರಿಕಾಟ್ ಡಿಲೈಟ್, ಗುಲಾಬ್ ಜಾಮೂನ್, ಚಾಕೊ ಲಾವಾ ಕೇಕ್ ಮತ್ತು ಡಬಲ್ ಡಾರ್ಕ್ ಚಂಕ್ ಚಾಕೊಲೇಟ್ ಕುಕೀ ಸೇರಿದಂತೆ ಹಲವು ತಿಂಡಿಗಳನ್ನು ಆರ್ಡರ್ ಮಾಡುತ್ತಿದ್ದಾರೆ.
ಸ್ವಿಗ್ಗಿ ಆಗಾಗ್ಗೆ ತನ್ನ ವ್ಯವಹಾರದ ಕುರಿತು ವರದಿಗಳನ್ನು ಬಿಡುಗಡೆ ಮಾಡುತ್ತದೆ. ಇತ್ತೀಚೆಗೆ 'How India Swiggy' ಎಂಬ ವಿಭಿನ್ನ ಶೀರ್ಷಿಕೆ ಮೂಲಕ ವರದಿಯೊಂದನ್ನು ಅನಾವರಣಗೊಳಿಸಿತ್ತು. ಈ ವರದಿಯಲ್ಲಿ, ಆಹಾರ ಪ್ರಿಯರು ಯಾವ ತಿನಿಸುಗಳನ್ನು ಹೆಚ್ಚಾಗಿ ಆರ್ಡರ್ ಮಾಡುತ್ತಾರೆ?, ಅವರ ಮೊದಲ ಆದ್ಯತೆ ಯಾವ ಖಾದ್ಯಕ್ಕೆ?, ಯಾವ ಆಹಾರ ಅತಿ ಹೆಚ್ಚು ಆರ್ಡರ್ ಆಗಿದೆ? ಸೇರಿದಂತೆ ಹಲವು ಕುತೂಹಲ ಅಂಶಗಳನ್ನು ಈ ವರದಿ ಒಳಗೊಂಡಿತ್ತು.