ಹೈದರಾಬಾದ್(ತೆಲಂಗಾಣ): 'ಮುಸ್ಲಿಂ ಡೆಲಿವರಿ ವ್ಯಕ್ತಿ ಬೇಡ' ಎಂಬ ಟ್ವೀಟ್ ಒಂದು ವೈರಲ್ ಆಗುತ್ತಿದ್ದು ಚರ್ಚೆ ಹುಟ್ಟು ಹಾಕಿದೆ. ಟ್ವೀಟ್ ಮೂಲಕ ಗ್ರಾಹಕರೋರ್ವರು ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಗೆ ಮುಸ್ಲಿಂ ಡೆಲಿವರಿ ಬಾಯ್ ಕಳುಹಿಸದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಹೈದರಾಬಾದ್: 'ಮುಸ್ಲಿಂ ಡೆಲಿವರಿ ವ್ಯಕ್ತಿ ಬೇಡ..' ಎಂದು ಬರೆದ ಸ್ವಿಗ್ಗಿ ಗ್ರಾಹಕ - ಸ್ವಿಗ್ಗಿ ಮುಸ್ಲಿಂ ಡೆಲಿವರಿ ಬಾಯ್
'ಮುಸ್ಲಿಂ ಡೆಲಿವರಿ ವ್ಯಕ್ತಿ ಬೇಡ' ಎಂಬ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
'ಮುಸ್ಲಿಂ ಡೆಲಿವರಿ ವ್ಯಕ್ತಿ ಬೇಡ' ಎಂದು ಬರೆದ ಸ್ವಿಗ್ಗಿ ಗ್ರಾಹಕ
ಈ ಟ್ವೀಟ್ ಸ್ಕ್ರೀನ್‌ಶಾಟ್ ಅನ್ನು ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರ್ಸ್ ಜೆಎಸಿ ಅಧ್ಯಕ್ಷ ಶೇಕ್ ಸಲಾವುದ್ದೀನ್ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರು ತಮ್ಮ ಟ್ವೀಟ್‌ನಲ್ಲಿ, ಸ್ವಿಗ್ಗಿ ಇಂತಹ ಗ್ರಾಹಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಘಟನೆಯ ಬಗ್ಗೆ ಸ್ವಿಗ್ಗಿ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ:ಜೂನ್ ತ್ರೈಮಾಸಿಕದಲ್ಲಿ ಎರಡಂಕಿ ದಾಖಲಿಸಿದ ಭಾರತದ ಆರ್ಥಿಕ ವೃದ್ಧಿ ದರ!