ನವದೆಹಲಿ:ಸ್ವಾಮಿ ವಿವೇಕಾನಂದ ಜನ್ಮದಿನದ ದಿನದ ಹಿನ್ನೆಲೆ ಅವರ ಸಾಧನೆ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಾಮಿ ವಿವೇಕಾನಂದರು ತಮ್ಮ ಇಡೀ ಜೀವನವನ್ನೇ ರಾಷ್ಟ್ರೀಯ ಪುನರುತ್ಥಾನಕ್ಕಾಗಿ ಮುಡಿಪಾಗಿಟ್ಟಿದ್ದರು. ಅಲ್ಲದೇ ರಾಷ್ಟ್ರ ನಿರ್ಮಾಣಕ್ಕಾಗಿ ಅನೇಕ ಯುವಕರನ್ನು ಪ್ರೇರೇಪಿಸಿದ್ದರು ಎಂದು ಪ್ರಧಾನಿ ಮೋದಿ ನೆನೆದಿದ್ದಾರೆ.
ಇಂದು ರಾಷ್ಟ್ರೀಯ ಯುವ ದಿನ: ಸ್ವಾಮಿ ವಿವೇಕಾನಂದರ ಸಾಧನೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ - ಟ್ವೀಟ್ ಮಾಡಿ ವಿವೇಕಾನಂದ ಸಾಧನೆ ಸ್ಮರಿಸಿದ ಪ್ರಧಾನಿ ಮೋದಿ
ಸ್ವಾಮಿ ವಿವೇಕಾನಂದರು ತಮ್ಮ ಇಡೀ ಜೀವನವನ್ನೇ ರಾಷ್ಟ್ರೀಯ ಪುನರುತ್ಥಾನಕ್ಕಾಗಿ ಮುಡಿಪಾಗಿಟ್ಟಿದ್ದರು. ಅಲ್ಲದೇ ರಾಷ್ಟ್ರ ನಿರ್ಮಾಣಕ್ಕಾಗಿ ಅನೇಕ ಯುವಕರನ್ನು ಪ್ರೇರೇಪಿಸಿದ್ದರು ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ಮೋದಿ
ಸ್ವಾಮಿ ವಿವೇಕಾನಂದರು ದೇಶಕ್ಕಾಗಿ ಕಂಡ ಕನಸುಗಳನ್ನು ನನಸು ಮಾಡಲು ರಾಷ್ಟ್ರವು ಒಟ್ಟಾಗಿ ಕೆಲಸ ಮಾಡಬೇಕೆಂದು ಕೋರಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶಾದ್ಯಂತ 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಇದಲ್ಲದೇ, ಪ್ರಧಾನಿ ಮೋದಿ ಅವರು ಇಂದು ಪುದುಚೇರಿಯಲ್ಲಿ ನಡೆಯುವ 25 ನೇ ರಾಷ್ಟ್ರೀಯ ಯುವ ಉತ್ಸವವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ:Pm Security Breach: ಪ್ರಧಾನಿ ಭದ್ರತಾ ಲೋಪ ಕುರಿತಂತೆ ಸುಪ್ರೀಂನಿಂದ ಹೊಸ ಸಮಿತಿ ನೇಮಕ