ನವದೆಹಲಿ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ತಂದೆ ಮತ್ತು ಸಹೋದರ ಇಬ್ಬರೂ ಸಂಸತ್ ಸದಸ್ಯರಿಗೆ ಕೇಂದ್ರ ಗೃಹ ಸಚಿವಾಲಯ 'ವೈ-ಪ್ಲಸ್' ಭದ್ರತಾ ರಕ್ಷಣೆಯನ್ನು ನೀಡಿದೆ.
ಸುವೇಂದು ಅಧಿಕಾರಿ ತಂದೆ, ಸಹೋದರನಿಗೆ 'ವೈ-ಪ್ಲಸ್' ಭದ್ರತೆ - ಸಿಸಿರ್ ಕುಮಾರ್ ಅಧಿಕಾರಿ
ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಂದೆ ಮತ್ತು ಸಹೋದರನಿಗೆ ಕೇಂದ್ರ ಗೃಹ ಸಚಿವಾಲಯ 'ವೈ +' ಭದ್ರತೆ ನೀಡಿದೆ.
ಸುವೆಂದು ಅಧಿಕಾರಿ ತಂದೆ,ಸಹೋದರನಿಗೆ ವೈ+ ಭದ್ರತೆ
ಕೇಂದ್ರ ಭದ್ರತಾ ಸಂಸ್ಥೆಗಳ ಪ್ರಕಾರ, ಇವರಿಗೆ ಬೆದರಿಕೆ ಇರುವ ಕಾರಣ ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೆಂದು ಅಧಿಕಾರಿಗೆ ಭದ್ರತೆ ಒದಗಿಸಿ ಸಚಿವಾಲಯ ಕ್ರಮ ಕೈಗೊಂಡಿದೆ.
ಸಿಸಿರ್ ಕುಮಾರ್ ಅಧಿಕಾರಿ ಕಾಂತಿ ಲೋಕಸಭಾ ಕ್ಷೇತ್ರ, ದಿಬ್ಯೆಂದು ಅಧಿಕಾರಿ ತಮ್ಲುಕ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದರಾಗಿದ್ದಾರೆ.