ಕರ್ನಾಟಕ

karnataka

ETV Bharat / bharat

ನನ್ನ ಮೈ ಮುಟ್ಟಬೇಡಿ.. ಸುವೇಂದು ಅಧಿಕಾರಿ ಹೇಳಿಕೆಗೆ ಟಿಎಂಸಿ ಗೇಲಿ - BJP leader Suvendu Adhikari

ಮಾಜಿ ಟಿಎಂಸಿ, ಹಾಲಿ ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಇಂದು ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ನೀಡಿದ ಹೇಳಿಕೆ ವ್ಯಂಗ್ಯಕ್ಕೀಡಾಗಿದೆ. ಮಹಿಳಾ ಪೊಲೀಸ್​ ಜೊತೆ ಅವರಾಡಿದ ಮಾತನ್ನು ಟಿಎಂಸಿ ಗೇಲಿ ಮಾಡಿದೆ.

suvendu-adhikaris
ಸುವೇಂದ್ರ ಅಧಿಕಾರಿ ಹೇಳಿಕೆಗೆ ಟಿಎಂಸಿ ಗೇಲಿ

By

Published : Sep 13, 2022, 11:01 PM IST

Updated : Sep 14, 2022, 6:55 AM IST

ಕೋಲ್ಕತ್ತಾ:ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಸರ್ಕಾರದ ವಿರುದ್ಧ ಇಂದು ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಿಜೆಪಿಗರನ್ನು ಪೊಲೀಸರು ತಡೆದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿಯನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ "ನನ್ನ ದೇಹ ಮುಟ್ಟಬೇಡಿ" ಎಂದು ಹೇಳಿದ್ದಾರೆ. ಇದನ್ನು ಟಿಎಂಸಿ ವ್ಯಂಗ್ಯವಾಡಿದೆ.

ಬಿಜೆಪಿಯ ಚಲೋ ನಬನ್ನಾ ರ್ಯಾಲಿಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಕೂಡ ಪೊಲೀಸರು ತಡೆದರು. ಭದ್ರತೆಗಿದ್ದ ಮಹಿಳಾ ಪೊಲೀಸ್​ ಅಧಿಕಾರಿಗಳು ಸುವೇಂದು ಅವರ ಬಳಿ ಹೋದಾಗ ನೀವು ನನ್ನ ದೇಹವನ್ನು ಮುಟ್ಟಬೇಡಿ ಎಂದು ಮೂರ್ನಾಲ್ಕು ಬಾರಿ ಗದರಿದರು.

ಬಿಜೆಪಿ ನಾಯಕನ ಈ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಟಿಎಂಸಿ, ಸುವೇಂದು ಅಧಿಕಾರಿ ಮೃದು ನಾಯಕರಾಗಿದ್ದಾರೆ. ಅವರನ್ನು ನಯವಾಗಿ ನಡೆಸಿಕೊಳ್ಳಿ ಎಂದರೆ, ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಇನ್ನೊಂದು ಟ್ವೀಟ್​ ಮಾಡಲಾಗಿದೆ.

ನಮ್ಮನ್ನು ಯಾರಾದರೂ ಮುಟ್ಟಲು ಬಂದಾಗ, ನನ್ನನ್ನು ಮುಟ್ಟಬೇಡಿ ಎಂದಷ್ಟೇ ಹೇಳುತ್ತೇವೆ. ಆದರೆ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ನನ್ನ ದೇಹವನ್ನು ಮುಟ್ಟಬೇಡಿ ಎಂದು ಹೇಳಿರುವುದು ಏನನ್ನು ತೋರುತ್ತದೆ ಎಂದು ಪ್ರಶ್ನಿಸಿ ಟ್ವೀಟ್​ ಮಾಡಲಾಗಿದೆ.

ಓದಿ:13ರ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಮಾವ

Last Updated : Sep 14, 2022, 6:55 AM IST

ABOUT THE AUTHOR

...view details